SHARE

ಖಾನಾಪುರ: ತಾಲೂಕಿನ ಇಟಗಿ ಬಳಿಯ ಬೋಗುರ ಹಳ್ಳದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ 6 ಜನರು ದುರ್ಮರಣಕ್ಕೀಡಾದ ಘಟನೆ ಶನಿವಾರ ಸಂಭವಿಸಿತ್ತು.

ಖಾನಾಪುರ ಶಾಸಕಿ ಡಾ ಅಂಜಲಿ ಹೇಮಂತ್ ನಿಂಬಾಳಕರ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರಿಗೆ ಖುದ್ದಾಗಿ ಪರಿಹಾರ ನಿಧಿಯ ಪತ್ರವನ್ನು ತೆಗೆದುಕೊಂಡ ಹೋಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂಪಾಯಿ ಹತ್ತು ಲಕ್ಷ ಪರಿಹಾರ ನಿಧಿ ಮಂಜೂರು ಮಾಡಲೇಬೇಕು ಎಂದು ಹಠ ತೊಟ್ಟಾಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮೃತರರಿಗೆ ತಲಾ 5,00,000/- ರಂತೆ ಮಂಜೂರು ಮಾಡಿದರು.

ಡಾ ಅಂಜಲಿ ನಿಂಬಾಳಕರ ಅವರ ಪ್ರಯತ್ನದ ಫಲವಾಗಿ ಮೃತರ ಕುಟುಂಬಕ್ಕೆ ಐದು ಲಕ್ಷ ರುಪಾಯಿ ಪರಿಹಾರ ನಿಧಿ ಮಂಜೂರು ಮಾಡಿಕೊಂಡು ಬರುವಲ್ಲಿ ಶಾಸಕಿ ಅವರು ಯಶಸ್ವಿಯಾಗಿದ್ದಾರೆ. ಇದನ್ನು ತಿಳಿದ ತಾಲೂಕಿನ ಜನರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಅವರಿಗೆ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.