SHARE

ಬೆಳಗಾವಿ:ಹಠವಾದಿ ರಮೇಶ ಜಾರಕಿಹೊಳಿ ತಮ್ಮ ಹಠಧೋರಣೆ ದಿನದಿಂದಲೂ ಗೆಲುವಿನ ಹೆಜ್ಜೆ ಇಡುತ್ತ ಬಂದಿದ್ದು ಈಗ ನಿರೀಕ್ಷಿತ ಜಲಸಂಪನ್ಮೂಲ ಇಲಾಖೆ ಪಡೆದು ಬೆಳಗಾವಿ ಸಚಿವರಾಗಿದ್ದಾರೆ. ಕಳೆದ ಗುರುವಾರದಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಿಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ. ಸಚಿವ ರಮೇಶ್​​ ಜಾರಕಿಹೊಳಿ ಆಸೆಯಂತೆ ಅವರಿಗೆ ಜಲಸಂಪನ್ಮೂಲ ಖಾತೆಯನ್ನೇ ನೀಡಲಾಗಿದೆ. ಇನ್ನು ಡಾ.ಕೆ ಸುಧಾಕರ್​​ಗೆ ವೈದ್ಯಕೀಯ ಶಿಕ್ಷಣ ಖಾತೆ, ಗೋಪಾಲಯ್ಯಗೆ ಸಣ್ಣ ಕೈಗಾರಿಕೆ ಖಾತೆ ನೀಡಲಾಗಿದೆ ಅಂತ ತಿಳಿದುಬಂದಿದೆ. ಶ್ರೀಮಂತ ಪಾಟೀಲ ಅವರಿಗೆ ಜವಳಿ ಇಲಾಖೆ ನೀಡಲಾಗಿದೆ.