SHARE

ಬೆಳಗಾವಿ: ಭಾರತ ಪರಿಕ್ರಮ ಯಾತ್ರೆ ಫೆ. 20ಕ್ಕೆ ಬೆಳಗಾವಿ ಪ್ರವೇಶಿಸುತ್ತಿದ್ದು, ಭಾರತ ಸಂವಿಧಾನ & ಜ್ವಲಂತ ಸಮಸ್ಯೆಗಳ ಮತ್ತು ಮಹಾತ್ಮಾ ಗಾಂಧೀಜಿ ಸಿದ್ಧಾಂತದ ಪ್ರಸ್ತುತತೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಗರದಲ್ಲಿ ನಡೆಯಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಮಾಜವಾದಿ ಸಮಾಗಮ ರಾಜ್ಯ ಸಂಚಾಲಕ ಅರವಿಂದ ದಳವಾಯಿ ಅಂದು ಖ್ಯಾತ ರಾಷ್ಟ್ರೀಯ ಹೋರಾಟಗಾರ್ತಿ ಮೇಧಾ ಪಾಟ್ಕರ್, ಅರುಣಕುಮಾರ, ಶ್ರೀ ವಾಸ್ತವ, ಸುನೀಲಂ, ಬಿ. ಜಿ. ಪಾರೀಖ, ಗಣೇಶದೇವಿ, ಹರಬಜನ್ ಸಿಂಹ ಸಿದ್ದು, ಪ್ರೊ. ರಾಜಕುಮಾರ ಜೈನ್, ಪ್ರೊ. ಆನಂದಕುಮಾರ, ಸುಬೋಧ ಕಾಂತ್ ಸಹಾಯ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಬಿ. ಆರ್. ಪಾಟೀಲ ಸೇರಿದಂತೆ ರಾಷ್ಟ್ರೀಯ ಹೋರಾಟಗಾರರು ವಿಚಾರವಾದಿಗಳು ಆಗಮಿಸಲಿದ್ದಾರೆ. ಫೆ. 20 ರಂದು ಅವರನ್ನು ನಗರದ ಪಿರಣವಾಡಿ ಕ್ರಾಸನಲ್ಲಿ ಆಹ್ವಾನಿಸಲಾಗುವುದು ನಂತರ ಟಿಳಕವಾಡಿ ವೀರಸೌಧದಲ್ಲಿ ಮಹಾತ್ಮಾ ಗಾಂಧೀಜಿ ಅವರಿಗೆ ಗೌರವಾರ್ಪಣೆ ನಡೆಯಲಿದ್ದು, ಕುಮಾರ ಗಂಧರ್ವ ರಂಗಮಂದಿರದಲ್ಲಿ ಬ್ರಹತ್ ವಿಚಾರ ಸಂಕಿರಣ ನಡೆಯಲಿದೆ ಎಂದರು.

ಬೆಳಗಾವಿ ಜಿಲ್ಲೆಯ ನ್ಯಾಯವಾದಿಗಳು, ಪತ್ರಕರ್ತರು, ವಿಚಾರವಾದಿಗಳು, ರೈತ ಮತ್ತು ಸಾಮಾಜಿಕ ಸಂಘಟನೆಗಳು, ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಅಲ್ಪಸಂಖ್ಯಾತ ಸಂಘಟನೆಗಳು ಸೇರಿ ಸಮಸ್ತ ಸಾರ್ವಜನಿಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಜಕೀಯ ಪಕ್ಷ, ಧರ್ಮ ಜಾತಿಯ ಆಚೆಗೆ ಈ ಸಮಾವೇಶ ನಡೆಯುತ್ತಿದ್ದು, ದೇಶದ ಸ್ವಸ್ಥತೆ ಕಾಪಾಡುವ ಯತ್ನ ಇದಾಗಿದೆ. ಮಹಾತ್ಮಾ ಗಾಂಧೀಜಿ ಆಶಯದಂತೆ, ಸಂವಿಧಾನದ ತಳಹದಿಯಲ್ಲಿ ವ್ಯವಸ್ಥೆ ನಡೆದಿದೆಯೇ ಎಂಬುವುದು ವಿಚಾರ ಸಂಕಿರಣದ ಮುಖ್ಯ ಉದ್ದೇಶ ಎಂದರು. ಸುದ್ದಿಗೋಷ್ಠಿಯಲ್ಕಿ ನ್ಯಾಯವಾದಿ ಆರ್. ಪಿ. ಪಾಟೀಲ, ಜಿ. ಎಸ್. ಗೋಕಾಕ, ಕಲ್ಯಾಣರಾವ ಮುಚಳಂಬಿ, ಮಲ್ಲೇಶ ಚೌಗುಲೆ, ಸಲೀಂ ಖತೀಬ್, ಅಶ್ಫಾಕ್ ಮಡಕಿ, ಗಜು ಧರನಾಯಕ, ಅನ್ನಪೂರ್ಣ ನಿರ್ವಾಣಿ, ಫಾರೂಕಿ ಸೇರಿ ಎಲ್ಲ‌ಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.