SHARE

ಬೆಳಗಾವಿ:ಎಂ. ಸ್ಯಾಂಡ್ 40ಲಕ್ಷ ಟನ್ ಉತ್ಪಾದನೆಗೆ ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಅನುಮತಿ ಇದೆ. ಅದರಂತೆ ಅದನ್ನು ಜಿಲ್ಲಾಡಳಿತ ಗ್ರಾಹಕರಿಗೆ ಹಂಚುವ ವ್ಯವಸ್ಥೆ ಮಾಡಲಿ ಎಂದು ಎಂ. ಸ್ಯಾಂಡ್ ಉತ್ಪಾದಕರ ಸಂಘ ಆಗ್ರಹಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಪಾಂಡುರಂಗ ರೆಡ್ಡಿ ಸಾಕಷ್ಟು ಖರ್ಚುಮಾಡಿ ಎಂ-ಸ್ಯಾಂಡ್ ಘಟಕಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೇಡಿಕೆಗೆ ಅನುಗುಣವಾಗಿ ಎಂ-ಸ್ಯಾಂಡ್ ಉತ್ಪಾದನೆ ಆಗುತ್ತಿದೆ. ಆದರೆ ಇತರ ನದಿತಟ ಮೂಲಗಳಿಂದ ಈಗ ಮರಳು ತೆಗೆಯಲು ಅನುಮತಿ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ಎಂ-ಸ್ಯಾಂಡ್ ಘಟಕ ತೆರೆಯಲು ಕನಿಷ್ಠ ₹ 4ಕೋಟಿ ರೂ ಖರ್ಚಾಗುತ್ತದೆ. ಕನಿಷ್ಠ 300 ವರ್ಷಗಳ ತಾಳಿಕೆ ಬಾಳಿಕೆ ಹೊಂದಿರುವ ಎಂ- ಸ್ಯಾಂಡ್ ಬಳಕೆಗೆ ಜಿಲ್ಲಾಡಳಿತ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು. ಬೇಡಿಕೆಗೆ ಅನುಗುಣವಾಗಿ 40ರಿಂದ 45ಲಕ್ಷ ಟನ್ ಎಂ-ಸ್ಯಾಂಡ್ ಉತ್ಪಾದನೆ ಜಿಲ್ಲೆಯಲ್ಲಿ ಆಗುತ್ತಿದೆ. ನದಿ(ಸೋಸುವ) ಮರಳಿಗೆ ಹೋಲಿಸಿದರೆ ಎಂ- ಸ್ಯಾಂಡ್ ವೆಚ್ಚಬೆಲೆ ಬಹಳ ಕಡಿಮೆ ಇದೆ ಎಂದರು.