SHARE

ಬೆಳಗಾವಿ: ಮಹಾದಾಯಿ ಯೋಜನೆ ಜಾರಿ, ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಸೇರಿ ಹತ್ತು ಹಲವು ಬೇಡಿಕೆಗಳಿಗೆ ಇಂದು ಆಗ್ರಹಿಸಲಾಗಿದೆ. ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಬೆಂಗಳೂರು ಪದಾಧಿಕಾರಿ ಹಾಗೂ ಕಾರ್ಯಕರ್ತರು ಇಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲು ಚೆನ್ನಮ್ಮನಿಗೆ ಮಾಲೆ ಹಾಕಿ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯಿಂದ ಬೆಂಗಳೂರು ಎಡೆಗೆ ರ‌್ಯಾಲಿ ಇಂದು ಹೊರಟಿತು. ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಸಂಪೂರ್ಣ ಅಭಿವೃದ್ಧಿ ಆಗಬೇಕು, ಕಲ್ಬುರ್ಗಿ ನಿಲ್ದಾಣಕ್ಕೆ ಬಸವಣ್ಣ ಹೆಸರು ಇಡುವುದು, ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಧಾನ್ಯತೆ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಸೇರಿ ಹಲವು ಬೇಡಿಕೆ ಇಡಲಾಗಿದೆ. ಸಂಸ್ಥಾಪಕ ರಾಜ್ಯ ಅಧ್ಯಕ್ಷ ಡಾ. ವಿಶ್ವನಾಥ ಜಿ. ಪಿ. ನೇತೃತ್ವದಲ್ಲಿ ಬ್ರಹತ್ ಪ್ರತಿಭಟನಾ ರ‌್ಯಾಲಿ ಬೆಂಗಳೂರಿಗೆ ಹೊರಟಿತು. ನೂರಾರು ಕನ್ನಡಪರ ಹಾಗೂ ನೇಕಾರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು.