SHARE

ಬೆಳಗಾವಿ: “ಸ್ಟೋಪ್ಟೋಬ್ಯಾಕೊ ಆಪ್ ಮೂಲಕ ದಾಖಲಾದ ಪ್ರಕರನದ ಆಧಾರದ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಸಹಯೋಗದೊಂದಿಗೆ ಫೆಬ್ರುವರಿ ೧೭ ರಂದು ನಗರದ ಸಿ.ಬಿ.ಟಿ ಬಸ್ ಸ್ಟಾಪ್ನಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಯ ಮಾಲಿಕರಿಗೆ ದಾಳಿಯನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣಾಧಿಕಾಗಳ ಮಾರ್ಗದರ್ಶನದಡಿಯಲ್ಲಿ ದಾಳಿಯಲ್ಲಿ ಸಾರ್ವಜನಿಕರಿಗೆ ಕೋಟ್ಪಾ-೨೦೦೩ ಕಾಯ್ದೆ ವಿರುದ್ದವಾಗಿ ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡುವ ಮತ್ತು ನೇರ ಪರೋಕ್ಷವಾಗಿ ತಂಬಾಕು ಜಾಹಿರಾತು ಪ್ರದರ್ಶನ, ಶೈಕ್ಷಣಿಕ ಆವರಣದ ೧೦೦ ಮೀಟರ ಅಂತರದೋಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ಜಾಗೃತಿ ಮೂಡಿಸಿ ಹಾಗು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಲಾಯಿತು. ಕೋಟ್ಪಾ-೨೦೦೩ ಕಾಯ್ದೆ ಅಡಿಯಲ್ಲಿ ಒಟ್ಟು ೪೭ ಪ್ರಕರಣಗಳನ್ನು ದಾಖಲಿಸಿ ೪೭೫೦/-ದಂಡ ವಿಧಿಸಲಾಯಿತು ಹಾಗೂ ಸೆಕ್ಷನ್-೪ ನಾಮಫಲಕವನ್ನು ವಿತರಿಸಿ, ಸಾರ್ವಜನಿಕರಲ್ಲಿ ತಂಬಾಕು ಸೇವನೆಯ ದುಷಪರಿಣಾಮದ ಕುರಿತು ಅರಿವು ಮೂಡಿಸಲಾಯಿತು. ದಾಳಿಯಲ್ಲಿ ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ, ಜಿಲ್ಲಾ ಸಮಾಜಿಕ ಕಾರ್ಯಕರ್ತೆ ಕವಿತಾ ರಾಜನ್ನವರ, ಹಿರಿಯ ಆರೋಗ್ಯ ಸಹಾಯಕರಾದ ವಿ.ಎಲ್. ಪಾತಳಿ ಹಾಗೂ ಆಯ್.ಎಮ್. ಕೋಕಟನೊರ ಪೊಲೀಸ ಸಿಬಂದ್ದಿಗಳು ಉಪಸ್ಥಿತರಿದ್ದರು.