SHARE

ವಿಧಾನಪರಿಷತ್‍ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿಸಿಎಂ ಲಕ್ಷ್ಮಣ ಗೆಲುವು ಸಾಧಿಸಿದ್ದಾರೆ. 113 ಮತಗಳನ್ನು ಪಡೆಯುವ ಮೂಲಕ ಲಕ್ಷ್ಮಣ ಸವದಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಸೋಮವಾರ ನಡೆದ ವಿಧಾನಪರಿಷತ್‍ನ ಉಪಚುನಾವಣೆ ವೇಳೆ ಒಟ್ಟು 222 ಮತಗಳ ಪೈಕಿ 120 ಸದಸ್ಯರು ಸವದಿ ಪರ ವೋಟಿಂಗ್ ಮಾಡಿದರು. ಆ 120 ಮತಗಳಲಿ 7 ಅಸಿಂಧುವಾಗಿವೆ ಹೀಗಾಗಿ 113 ಮತಗಳು ಲಕ್ಷ್ಮಣ್ ಸವದಿ ಪರ ಚಲಾವಣೆಯಾಗಿದ್ದು, ಸವದಿ ಅಧಿಕೃತವಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೊರತುಪಡಿಸಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಮತದಾನದಿಂದ ದೂರ ಉಳಿದಿದ್ದರು.