SHARE

ಬೆಳಗಾವಿ: ಸಿಎಎ, ಎನ.ಆರ.ಸಿ, ಎನಪಿಆರಗೆ ನಮ್ಮದು ವಿರೋಧವಿದೆ ಎಂದು ಸಿಪಿಐಎಂ ರಾಷ್ಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಗುಡುಗಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಬಿಜೆಪಿ ತನ್ನ ಕೋಮುವಾದಿ ಹಿಂದುತ್ವ ಓಟ್ ಬ್ಯಾಂಕ್ ಗಟ್ಟಿಗೊಳಿಸಲು ಹುನ್ನಾರ ನಡೆಸಿದೆ. ಎನ‌ಆರಸಿಗಾಗಿ ದೇಶದ ಜನತೆ ದಾಖಲಾತಿಗಾಗಿ ಪರದಾಡಬೇಕುತ್ತದೆ. ಇದು ದೇಶದ ಬಡವರು, ದಲಿತರು, ಆದಿವಾಸಿಗಳಿಗೆ ಮಾರಕವಾಗಿದೆ. ಹಿಂದುತ್ವ ಕೋಮುವಾದಿ ಓಟ್ ಬ್ಯಾಂಕಗಾಗಿ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಜನರಿಗೆ ನಾಗರಿಕತೆ ನೀಡಲಾಗಿದೆ. ಇದು ನಮ್ಮ ದೇಶದ ಸಂವಿಧಾನ ಉಲ್ಲಂಘನೆ ಆಗಲಿದೆ. ಇವತ್ತು ಒಂದು ಧರ್ಮದವರು ಮುಂದೆ ಬೇರೆ ಬೇರೆ ಧರ್ಮದವರ ಮೇಲೆ ಪ್ರಯೋಗ ಆಗಬಹುದು. ಇದರಿಂದಲೇ ದೆಹಲಿಯಲ್ಲಿ ಹಿಂಸಾಚಾರ ಕ್ಕೆ ಸಾಕ್ಷಿ. ಇದರ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ದೇಶ ದ್ರೋಹಿ ಕೇಸ್ ಬೆಂಗಳೂರಿನಲ್ಲಿ ನಡೆದಿದೆ, ಅಮೂಲ್ಯ ಅವಳನ್ನ ಅರೇಸ್ಟ್ ಮಾಡಲಾಗಿದೆ. ಅಲ್ಲಿ ಬಿಟ್ಟರೆ ಬೇರೆಯಲ್ಲೂ ಪಾಕ ಪರ ಘೋಷಣೆ ಕೂಗಿಲ್ಲ. ನಾನು ಹೇಳ್ತಿನಿ ಹಿಂದೂಸ್ಥಾನ ಜಿಂದಾಬಾದ್ ಎಂದರು. ಇದಕ್ಕೂ ಮುಂದೆ ಹೋಗದಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರು. ಸೀತಾರಾಮ್ ಕೂಡ ಹಿಂದು ಇದ್ದಾನೆ. ಆದ್ರೆ ನನ್ನದು ಬಿಜೆಪಿಯ ಕೋಮುವಾದಿ ಓಟ್ ಬ್ಯಾಂಕ್ ಹಿಂದುತ್ವಕ್ಕೆ ವಿರೋಧವಿದೆ. ಟ್ರಂಪ್ ಭಾರತ ಪ್ರವಾಸ ವಿಚಾರ ಪ್ರಸ್ತಾಪಿಸಿ ಟ್ರಂಪ್ ತಮ್ಮ ದೇಶದ ಮಾರ್ಕೆಟಿಂಗ್ ಮಾಡಲು ಬಂದಿದ್ದಾರೆ. ಅಮೆರಿಕಾ ಉತ್ಪಾದಿಸುವ ಕೃಷಿ ಪದಾರ್ಥಗಳಿಗೆ ಭಾರತೀಯ ಮಾರುಕಟ್ಟೆ ಒದಗಿಸಲು ಬಂದಿದ್ದಾರೆ. ಇದರಿಂದ ಭಾರತೀಯ ಅನ್ನದಾತರಿಗೆ ಪೆಟ್ಟಾಗಲಿದೆ. ಈಗಾಗಲೇ ನಮ್ಮ ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಮೆರಿಕಾದ ಔಷಧಿಗಳಿಗೆ ಮಾರುಕಟ್ಟೆ ಕಲ್ಪಿಸಲು ಬಂದಿದ್ದಾರೆ. ಮೋದಿ ಸರ್ಕಾರದ ಉದ್ದೇಶ ಬಡತನ ನಿರ್ಮೂಲನೆ ಅಲ್ಲ. ಬಡವರ ನಿರ್ಮೂಲನೆ ಆಗಿದೆ ಎಂದು ಸೀತಾರಾಮ್ ಯೆಚೊರಿ ಕಿಡಿಕಾರಿದ್ದಾರೆ.