SHARE

ಬೆಳಗಾವಿ: ನಕಲಿ ಅರ್ಚಕರು, ನಕಲಿ ಪೂಜಾರಿಗಳನ್ನು ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ನಿಯಂತ್ರಿಸಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ನಕಲಿ ಪೂಜಾರಿಗಳು ಬಹುಸಂಖ್ಯೆಯಲ್ಲಿ ಆವರಿಸಿಕೊಂಡಿದ್ದು ಬೆಲೆಬಾಳುವ ಆಭರಣ, ಬಟ್ಟೆಬರೆ ಮತ್ತಿತರ ಭಕ್ತರು ನೀಡಿದ ದೇಣಿಗೆಗಳು ಪೂಜಾರಿಗಳ ಮನೆ ಸೇರುತ್ತಿವೆ ಎಂಬ ಮಾಧ್ಯಮಗಳ ಗಂಭೀರ ಪ್ರಶ್ನೆಗೆ ಸಚಿವರು ದಿಗ್ಭ್ರಮೆ ವ್ಯಕ್ತಪಡಿಸಿದರು. ಯಲ್ಲಮ್ಮ ದೇವಸ್ಥಾನದಲ್ಲಿ ಅನಗತ್ಯ ಓಡಾಡುವ ಯಾರೇ ಇದ್ದರೂ ಅವರನ್ನು ನಿಯಂತ್ರಿಸಲಾಗುತ್ತದೆ. ದೇವಿಗೆ ಬರುವ ದೇಣಿಗೆಗಗಳನ್ನು ಸರಕಾರ ವ್ಯವಸ್ಥಿತವಾಗಿ ಇಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.