SHARE

ಖಾನಾಪುರ: ಕಳೆದ ಎರಡೂ ತಿಂಗಳುಗಳಿಂದ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು, ಕಾಡಿನಲ್ಲಿ ಪ್ರಾಣಿಗಳಿಗೆ ಹಸಿರು ಇಲ್ಲದಿರುವುದರಿಂದ ತಿನ್ನಲು ಆಹಾರವು ಇಲ್ಲದೇ, ಕುಡಿಯಲು ನೀರು ಇಲ್ಲದೇ ಪರದಾಡುವಂತ ಪರಿಸ್ಥಿತಿ ಹಲವೆಡೆ ಕಂಡು ಬರುತ್ತಿದ್ದರಿಂದ ಕೆಲವು ಪ್ರಾಣಿಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತುವೆ. ತಾಲೂಕಿನ ಹೊಸಲಿಂಗನಮಠ ಗ್ರಾಮದ ಪಕ್ಕದಲ್ಲಿಯೆ ಇರುವ ಧಾರವಾಡ ಜಿಲ್ಲೆಯ ಹುಲಿಕೇರಿ ಕಾಡು ಪ್ರದೇಶದಿಂದ ಜಿಂಕೆಯೊಂದು ಆಹಾರ‌ ಮತ್ತು ನೀರು ಅರಸಿ ನಾಡಿಗೆ ಬಂದ ಪ್ರಕರಣ ಬೆಳಕಿಗೆ ಬಂದಿದೆ.

ಹೊಸಲಿಂಗನಮಠ ಗ್ರಾಮದ ಒಳಗಡೆ ಜಿಂಕೆ ಬರುತ್ತಿದ್ದಂತಯೇ, ಹಲವು ಗ್ರಾಮಸ್ಥರು ಅದನ್ನು ಕಂಡು ಭಯಭೀತರಾಗಿದ್ದರು. ಇದನ್ನು ಗಮನಿಸಿ ಗ್ರಾಮದ ಯುವಕರು ಅದನ್ನು ಹಿಡಿದು ಒಂದು ಕೋಣೆಯಲ್ಲಿ ಕೂಡಿಹಾಕಿ ಅದಕ್ಕೆ ನೀರು ಉಪಚಾರ ಮಾಡಿದರು. ಅದರ ಆರೈಕೆ ಮಾಡಿದರು ಮರಿಜಿಂಕೆ ಗ್ರಾಮಸ್ಥರನ್ನು ಕಂಡು ಕೆಲಕಾಲ ಭಯಪಟ್ಟು ತಡವರಿಸುತ್ತಿತ್ತು.
ತದನಂತರ ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಿದಾಗ, ಅವರು ಬರುವವರೆಗೆ ಅದರ ಆರೈಕೆಯನ್ನು ಗ್ರಾಮಸ್ಥರು ಮಾಡಿದ್ದಾರೆ. ತಕ್ಷಣವೇ ಗೋಲಿಹಳ್ಳಿ ವಲಯ ಅರಣ್ಯ ಅಧಿಕಾರಿ, ಗೋಧೋಳಿ ಉಪವಿಭಾಗ ಅರಣ್ಯ ವಲಯದ ಸಿಬ್ಬಂಧಿಗಳು ಹೊಸಲಿಂಗನಮಠ ಗ್ರಾಮಕ್ಕೆ ದೌಡಾಯಿಸಿ ಬಂದಿದ್ದರು.

ತದನಂತರ ಅರಣ್ಯ ಇಲಾಖೆಯವರು ಜಿಂಕೆಯನ್ನು ತಮ್ಮ ವಶಕ್ಕೆ ಪಡೆದು ಅದನ್ನು ಪಕ್ಕದ ಗೋಧೋಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಗ್ರಾಮದ ಯುವಕರ ಕಾರ್ಯಕ್ಕೆ ಅರಣ್ಯ ಇಲಾಖೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೀಗೆ ಗ್ರಾಮಸ್ಥರ ಹಾಗೂ ಯುವಕರ ಸಹಾಯ ಸಹಕಾರ ಸದಾಕಾಲ ಅರಣ್ಯ ಇಲಾಖೆ ಜೋತೆ ಇರಲಿ ಎಂದರು. ಈ ಸಂಧರ್ಭದಲ್ಲಿ ಗೋಲಿಹಳ್ಳಿ ವಲಯ ಅರಣ್ಯ ಅಧಿಕಾರಿ ಶೀನಾಥ ಕಡೋಲಕರ, ಗೋಧೋಳ್ಳಿ ಉಪವಿಭಾಗ ಅರಣ್ಯ ಅಧಿಕಾರಿ ಪ್ರಕಾಶ ಮರೆಪ್ಪನವರ, ಗಾರ್ಡ ಮಂಜುನಾಥ ಗೌಡರ ಹಾಗೂ ಹೊಸಲಿಂಗನಮಠ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.