SHARE

ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಖಾನಾಪೂರ ತಾಲೂಕಿನ ಬೇಡರಹಟ್ಟಿ ಗ್ರಾಮದ ಬಸವರಾಜ ಯಲ್ಲಪ್ಪ ನಾಯಕ (೪೦), ಗಂದಿಗವಾಡ ಗ್ರಾಮದ ಶಂಕರ ಚನ್ನಬಸಪ್ಪ ಜಕರಾಯ (೨೫) ಹಾಗೂ ಗೋಕಾಕ ತಾಲೂಕಿನ ಮಲ್ಲಮರಡಿ ಗ್ರಾಮದ ಮಲ್ಲೇಶ ಯಲ್ಲಪ್ಪ ಪೂಜೇರಿ (೨೦) ಬಂಧಿತರು. ಗುರು ಉರ್ಪ್ ಕರಿಯಪ್ಪ ಯಲ್ಲಪ್ಪ ನಾಯಕ (೩೦) ಹತ್ಯೆಗೀಡಾಗಿದ್ದ ವ್ಯಕ್ತಿ. ಮೃತ ಕರಿಯಪ್ಪನಿಗೂ ಹಿರಿಯ ಸಹೋದರ ಬಸವರಾಜನ ಪತ್ನಿಗೂ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಕಳೆದ ೧೨ ವರ್ಷಗಳ ಹಿಂದೆಯೆ ಮಕ್ಕಳೊಂದಿಗೆ ಕರೆದುಕೊಂಡು ಊರು ಬಿಟ್ಟು ಹೋಗಿದ್ದನು. ಕಳೆದ ಫೆ.೧೩ ರಂದು ತಮ್ಮ ಊರಿನಲ್ಲಿ ಜಾತ್ರೆ ಇರುವುದರಿಂದ ಮರಳಿ ಬಂದಿದ್ದನು. ವೈಮನಸ್ಸು ಹೊಂದಿದ್ದರಿಂದ ಬಸವರಾಜ ತನ್ನ ಸಂಬಂಧಿಕಾರದ ಶಂಕರ ಹಾಗೂ ಮಲ್ಲೇಶ ಅವರೊಂದಿಗೆ ಸೇರಿಕೊಂಡು ಕರಿಯಪ್ಪನನ್ನು ಕೊಲೆ ಮಾಡಿದ್ದಾರೆ. ನಂತರ ಈ ಪ್ರಕರಣ ಮುಚ್ಚಿ ಹಾಕುವ ಹಾಗೂ ಸಾಕ್ಷ್ಯ ಉದ್ದೇಶದಿಂದ ಇದ್ದಲಹೊಂಡದ ರೇಲ್ವೆ ನಿಲ್ದಾಣ ಹತ್ತಿರ ರೈಲು ಹಳಿಯ ಮೇಲೆ ಎಸೆದು ಹೋಗಿದ್ದರು.

ಫೆ.೧೪ ರಂದು ಬೆಳಗಾವಿ ರೇಲ್ವೆ ಪೊಲೀಸರಿಗೆ ಅನಾಮಧೇಯ ಶವ ಪತ್ತೆಯಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಸಂದರ್ಭದಲ್ಲಿ ಮೃತ ವ್ಯಕ್ತಿ ಗುರು ಉರ್ಪ್ ಕರಿಯಪ್ಪ ಯಲ್ಲಪ್ಪ ನಾಯಕ ಖಾನಾಪೂರ ತಾಲೂಕಿನ ಬೇಡರಹಟ್ಟಿ ಗ್ರಾಮದವನು ಎಂಬ ಸುಳಿವು ಸಿಕ್ಕದೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಮೃತ ವ್ಯಕ್ತಿಯ ಮನೆಯವರನ್ನು ವಿಚಾರಣೆ ನಡೆಸಿದ ಸಮಯದಲ್ಲಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಪತ್ತೆ ಕಾರ್ಯದಲ್ಲಿ ಪೊಲೀಸ್ ಇನ್ಸಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ನೇತೃತ್ವದಲ್ಲಿ ಪಿಎಸ್‌ಐ ಟಿ.ರಮೇಶ, ಎ ಎಸ್‌ ಐ ರಮೇಶ.ಎಚ್, ಸಿಬ್ಬಂದಿಗಳಾದ ಬಿ.ಬಿ.ಬಂಡಿವಡ್ಡರ, ಮಂಜುನಾಥರಾವ್, ಐ.ಬಿ.ಕಲಕೇರಿ, ಪ್ರಭು ಗೋಣೆ, ಸಂಗಪ್ಪ ಕೋಟ್ಯಾಳ, ಶಂಕರಾನಂದ ಪೂಜೇರಿ, ಮಂಜುನಾಥ ರಾಯಕೊಪ್ಪ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು. ಈ ಕುರಿತು ಬೆಳಗಾವಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.