SHARE

ಬೆಳಗಾವಿ: ಡಿಸಿ ಕಚೇರಿ ಬಳಿಯ ಪ್ರಸ್ತುತ ಅಂಡರಪಾಸ್ ಗೆ ಪರ್ಯಾಯವಾಗಿ ಮತ್ತೊಂದು ಅಂಡರಪಾಸ್ ನಿರ್ಮಿಸುವಂತೆ ನಗರಾಭಿವೃದ್ಧಿ ಸಚಿವ ಬಿ. ಎ. ಬಸವರಾಜ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮತ್ತು ನ್ಯೂ ಕೋರ್ಟ್ ಕಾಂಪ್ಲೆಕ್ಸ್ ನಡುವೆ ನಿರ್ಮಿತ ಅಂಡರಪಾಸ್ ಅವೈಜ್ಞಾನಿಕವಾಗಿದ್ದು ಮಳೆ ನೀರಿನಿಂದ ತುಂಬಿರುತ್ತದೆ. ಪ್ರಸ್ತುತ ಅಂಡರಪಾಸ್ ನಮಗೆ ಬೇಕಾಗಿಲ್ಲ ಎಂದು ನ್ಯಾಯವಾದಿ ಎ. ಜಿ. ಮುಳವಾಡಮಠ ನೇತೃತ್ವದಲ್ಲಿ ಜಿಲ್ಲಾ ಬಾರ್ ಅಸೋಸಿಯೇಶನ್ ಒತ್ತಾಯಿಸಿತು.

ಅಂಡರಪಾಸ್ ಖುದ್ದು ಪರಿಶೀಲನೆ ನಡೆಸಿದ ನಗರಾಭಿವೃದ್ಧಿ ಸಚಿವ ಬಸವರಾಜ ಸಣ್ಣ ಪ್ರಮಾಣದ ಇನ್ನೊಂದು ವ್ಯವಸ್ಥಿತ ಅಂಡರಪಾಸ್ ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿಕೊಡುವಂತೆ ಎಂಡಿ ಶಶಿಧರ ಕುರೇರ ಅವರಿಗೆ ಸೂಚಿಸಿದರು. ಕನಿಷ್ಠ 50 ಅಡಿ ಉದ್ದದ ಅಂಡರಪಾಸ್ ನಿರ್ಮಿಸಿಕೊಟ್ಟರೆ ರಸ್ತೆ ಸರಾಗವಾಗಿ ದಾಟಲು ಅನುಕೂಲವಾಗುವ ಬಗ್ಗೆ ನ್ಯಾಯವಾದಿಗಳು ಸಚಿವರಿಗೆ ಮನವರಿಕೆ ಮಾಡಿದರು.