SHARE

ಬೆಳಗಾವಿ: ಭಾನುವಾರ ಯಾರೂ ಹೊರಬಾರದಂತೆ ಆರೋಗ್ಯ ಸಚಿವ ಶ್ರೀರಾಮುಲು ಜನತೆಗೆ ಸೂಚಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಸಭೆ ನಡೆಸಿದ ಅವರು ಭಾನುವಾರ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಜನತೆ ಮನೆಯಲ್ಲಿಯೇ ಇರಬೇಕು. ಯಾರೂ ಮನೆಯಿಂದ ಹೊರಬಾರದು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ 18ಕೇಸ್ ಈ ಕ್ಷಣದವರೆಗೆ ದಾಖಲಾಗಿವೆ. ಜರ್ಮನ್, ಅಮೇರಿಕಾದಲ್ಲಿ ಕರೋನಾಗೆ ಔಷಧಿ ಕಂಡು ಹಿಡಿಯಲಾಗಿದೆ. ಅದಕ್ಕೆ ಈಗ ಸಾವಿಗೆ ಭಯಪಡಬೇಕಿಲ್ಲ ಎಂದು ಜನತೆಗೆ ಅಭಯ ನೀಡಿದರು. ಕರೋನಾ ಸೊಂಕಿತರು ಚೇತರಿಸಿಕೊಳ್ಳುತ್ತಾರೆ. ಭಯ ಪಡದೇ ಎಚ್ಚರಿಕೆ ವಹಿಸಿ, ಸರಕಾರದ ಮಾರ್ಗದರ್ಶನ ಪಾಲಿಸಿ ಎಂದು ಜನತೆಗೆ ಮನವಿ ಮಾಡಿದರು. ಬೆಳಗಾವಿ ಜಿಲ್ಲೆಗೆ ತಕ್ಷಣ 20 ಕೋಟಿ ಸರಕಾರ ಸಹಾಯ ಮಾಡಲಾಗಿದೆ ಎಂದರು.