SHARE

ಬೆಳಗಾವಿ: ಕರೋನಾ ವೈರಸ್ ಹರಡಿರುವ ಬಗ್ಗೆ ಫೇಸಬುಕನಲ್ಲಿ ಸುಳ್ಳು ವದಂತಿ ಹರಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಅಥಣಿ ತಾಲೂಕು ಐಗಳಿಯ ಗೌಡೇಶ ಬಿರಾದಾರ ತುಂಗಳ ಎಂಬುವವನು ಬಂಧಿತ ಆರೋಪಿತ ‘…ಗೋವಾಕ್ಕೆ ದುಡಿಯಲು ಹೋದ ಐಗಳಿ ಗ್ರಾಮದ ಐವರು ಬಲಿ, ಅವರನ್ನು ವಶಕ್ಕೆ ಪಡೆಯಲಾಗಿದೆ…’ ಎಂದೆಲ್ಲ ಸುಳ್ಳು ವದಂತಿ ಪೇಸಬುಕನಲ್ಲಿ ಬರೆದುಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಕಾರಣನಾಗಿದ್ದ. ಆತನ ವಿರುದ್ಧ ಎಫ್ ಐಆರ್ ದಾಖಲಿಸಿ ನ್ಯಾಯಾಲಯ ವಶಕ್ಕೆ ನೀಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.