SHARE

ಹುಬ್ಬಳ್ಳಿ: ಸಾಮೂಹಿಕ ಪ್ರಾರ್ಥನೆ ಮಾಡದಂತೆ ತಿಳಿಹೇಳಿದ ಪೊಲೀಸರೊಂದಿಗೆ ಮುಸ್ಲಿಂ ಸಮುದಾಯದವರು ತಂಟೆಗೆ ಇಳಿದಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟಿಗೆ ನಮಾಜ್ ಮಾಡದಂತೆ ಸೂಚಿಸಿದ ಟೌನ್ ಠಾಣೆ ಪೊಲೀಸರು & ಮುಸ್ಲಿಂ ಸಮುದಾಯ ನಡುವೆ ವಾಗ್ವಾದ ನಡೆದಿದೆ. ಪೊಲೀಸರ ಮಾತಿಗೆ ಮಣಿಯದ ಮುಸ್ಲಿಂ ಸಮುದಾಯದ ಕೆಲವರನ್ನ ಬಂಧಿಸಲು ಮುಂದಾದ ಪೊಲೀಸರು‌, ಇದರಿಂದ ರೊಚ್ಚಿಗೆದ್ದ ಮುಸ್ಲಿಂ ಸಮುದಾಯ, ಬಂಧಿಸಿ ಕರೆದೊಯ್ಯುತ್ತಿದ್ದ ಪೊಲೀಸ್ ಜೀಪ್ ಮೇಲೆ ಕಲ್ಲು, ಚಪ್ಪಲಿ ಮುಸ್ಲಿಂ ಮಹಿಳೆಯರು & ಮಕ್ಕಳು ಎಸೆದಿದ್ದಾರೆ.

ಮಂಟೂರ್ ರಸ್ತೆ ಅರಳಿಕಟ್ಟಿ ಬಡಾವಣೆಯ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಒಬ್ಬ ಪೊಲೀಸ್ ಪೇದೆಗೆ ಗಾಯವಾಗಿದೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಸ್ಥಳದಲ್ಲಿ ಬಿಗುವಿನ ವಾತಾರಣ ಉಂಟಾಯಿತು. ಪೊಲೀಸ್ ಬಿಗಿ ಬಂದೋಬಸ್ತ ಹಾಕಲಾಗಿದ್ದು, ಹಲ್ಲೆಕೋರರನ್ನು ಟೌನ್ ಠಾಣೆ ಪೊಲೀಸರು ಶೋಧಿಸುತ್ತಿದ್ದಾರೆ.