SHARE

ಬೆಳಗಾವಿ: ಬೆಳಗಾವಿ ನಗರದಲ್ಲಿ ಮೂರು ಕರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ದೆಹಲಿ ಮರ್ಕಜ್ ಧರ್ಮಸಭೆಗೆ ತೆರಳಿ, ಮರಳಿದ್ದವರ ಪೈಕಿ ಮೂವರಿಗೆ ಕರೋನಾ ಧೃಡಪಟ್ಟಿದ್ದು, ಜಿಲ್ಲಾ ಆಡಳಿತ ಸ್ಪಷ್ಟಪಡಿಸದಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ವಿಷಯ ಹೊರಗೆಡವಿದ್ದಾರೆ.

ದೆಹಲಿ ನಿಜಾಮುದ್ದಿನ ಮರ್ಕಜ್ ಗೆ ತೆರಳಿದ್ದ 62 ಜನರ ಪೈಕಿ, 33 ಜನರ ಗಂಟಲು ದೃವ ಟೆಸ್ಟಗೆ ಕಳುಹಿಸಲಾಗಿತ್ತು. ಆ ಪೈಕಿ ಮೂವರಿಗೆ ಸೋಂಕು ಇರುವುದು ಜಿಲ್ಲಾ ಮಂತ್ರಿ ಮೂಲಕ ಧೃಡಪಟ್ಟಿದ. ಕರೋನಾ ಹರಡದಂತೆ ಭಾರಿ ಬಂದೋಬಸ್ತ, ಮುಂಜಾಗ್ರತಾ ಕ್ರಮ ವಹಿಸಿದ್ದ ಜಿಲ್ಲಾಡಳಿತಕ್ಕೆ ಕೊನೆಗೂ ನಿರಾಸೆಯಾಗಿದೆ. ಮರ್ಕಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರ ಪೈಕಿ ಮೂವರಿಗೆ ಧೃಡಪಟ್ಟಿದ್ದು, ಅವರ ಕುಟುಂಬ ಸದಸ್ಯರ ಪರೀಕ್ಷೆ ಸಹ ನಡೆಯಲಿದೆ. ಶುಕ್ರವಾರ ಸಂಜೆ ಭಾರಿ ಪೊಲೀಸ್ ಬಂದೋಬಸ್ತ ಹಾಕಲಾಗಿದೆ.