SHARE

ಬೆಳಗಾವಿ: ಪಾಸಿಟಿವ್ ಕರೋನಾ ಮೂರು ರೋಗಿಗಳು ಉಗಿಯುತ್ತಿದ್ದಾರೆ, ತಿರುಗಾಡುತ್ತಿದ್ದಾರೆ ಎಂಬುವುದಾಗಿ ಹೊರಗಿನ ವ್ಯಕ್ತಿಯೊಬ್ಬ ವಿಡಿಯೋ ವೈರಲ್ ಮಾಡಿದ ವಿಷಯ ಗಂಭೀರವಾಗಿ ಪರಿಗಣಿಸಿದ್ದು ಅಂತಹ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಜಿಲ್ಲಾಸ್ಪತ್ರೆ ಐಸೊಲೇಷನ್ ವಾರ್ಡ್ ಸಿದ್ದಪಡಿಸಿಕೊಂಡಿದ್ದು ಇಲ್ಲಿ ವ್ಯಾಪಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ‌. ಪಾಸಿಟಿವ್ ಮತ್ತು ಐಸೊಲೇಷನ್ ರೋಗಿಗಳನ್ನು ಪ್ರತ್ಯೇಕವಾಗಿ ಮತ್ತು ಅಗತ್ಯ ಮಾರ್ಗದರ್ಶಿಗಳ ಅನ್ವಯವೇ ತಪಾಸಣೆ ಮಾಡಲಾಗುತ್ತಿದೆ. ಆದರೆ ಆಡಳಿತದ ಸಂಪೂರ್ಣ ವ್ಯಸ್ಥೆಯ ಹೊರತಾಗಿಯೂ ಕೆಲವರು ಸುಳ್ಳು ಸುದ್ದಿ ಹಬ್ಬಿಸುವ ಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಅಸಮಧಾನ ವ್ಯಕ್ತಪಡಿಸಿದ್ದು ಪೊಲೀಸ್ ತಪಾಸಣೆ ನಡೆಯುತ್ತದೆ ಎಂಬ ಗಂಭೀರ ಎಚ್ಚರಿಕೆ ಸಹ ನೀಡಿದ್ದಾರೆ.

ಬಿಮ್ಸ್ ನಿರ್ದೇಶಕ ಡಾ. ದಾಸ್ತಿಕೊಪ್ಪ ಮಾತನಾಡಿ ಪಾಸಿಟಿವ್ ರೋಗಿಗಳು ಆಸ್ಪತ್ರೆಯಲ್ಲಿ ಓಡಾಡುತ್ತಿದ್ದಾರೆ, ಉಗಿಯುತ್ತಿದ್ದಾರೆ ಎಂಬ ಆರೋಪದ ಬಗ್ಗೆ ತಕ್ಷಣ ಪರಿಶೀಲನೆ ಮಾಡಿ ರೋಗಿಗಳಿಗೆ ತಿಳಿವಳಿಕೆ ನೀಡಲಾಗಿದೆ ಎಂದು ಅವರು ತಿಳಿಸಿ ಸಹಕಾರ ಯಾಚಿಸಿದ್ದಾರೆ. ಜಿಲ್ಲಾಡಳಿತ ರೋಗಿಗಳ ತಪಾಸಣೆ ಮತ್ತು ಅವರನ್ನು ಚಿಕಿತ್ಸೆಗೆ ಹಿಡಿದಿಡಬೇಕಾದ ಅಗತ್ಯ ಎಚ್ಚರಿಕೆ ವಹಿಸಿದೆ ಎಂದು ಡಿಸಿ ಡಾ. ಬೊಮ್ಮನಹಳ್ಳಿ ತಿಳಿಸಿದ್ದಾರೆ.