SHARE

ಬೆಳಗಾವಿ: ಸರ್ಕಾರದ ಆದೇಶದಂತೆ ಅತಿ ಸರಳತೆಯಿಂದ ಸಾಮಾಜಿಕೆ ಅಂತರ ಕಾಯ್ದುಕೊಂಡು “ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ (ರಿ,) ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೆಳಗಾವಿಯ ಒಕ್ಕೂಟದ ಪ್ರಧಾನ ಕಚೇರಿಯಲ್ಲಿ ವಿಶ್ವ ರತ್ನ ಮಹಾಮಾನವ, ವಿಶ್ವ ನಾಯಕ, ಸಾಮಾಜಿಕ ಸಮಾನತೆ ಹರಿಕಾರ,ಸಾಮಾಜಿಕ ಕ್ರಾಂತಿ ಸೂರ್ಯ, ಸಂವಿಧಾನ ಶಿಲ್ಪಿ, ಬಹು ಮುಖ ವ್ಯಕ್ತಿತ್ವದ ರಾಜಿಕೀಯ, ಆರ್ಥಿಕ ತಜ್ಞ, ಜಾತಿ, ಮತಗಳನ್ನು ಬಿಟ್ಟು ಮಾನವೀಯತೆಗೆ ಜೀವ ಕೊಟ್ಟ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರರ 129 ನೇಯ ಜಯಂತಿಯನ್ನು ಅತಿ ಸರಳತೆಯಿಂದ ಒಕ್ಕೂಟದ ಪರವಾಗಿ ಆಚರಿಸಲಾಯಿತು.

ಈ ಜಯಂತಿ ಆಚರಣೆ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ರಾಜ್ಯ ಗೌರವ ಅಧ್ಯಕ್ಷ ಶ್ರೀ ಸಿದರಾಯಿ ಪಿ ಶೀಗಿಹಳ್ಳಿ ,ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್.ಎಸ್.ಮೂಕನವರ, ಕರ್ನಾಟಕ ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ರಾಜ್ಯ ಯುವ ಘಟಕದ ಅಧ್ಯಕ್ಷ ಕುಮಾರ ಮಹೇಶ್ ಎಸ್,ಶೀಗಿಹಳ್ಳಿ ,ಶ್ರೀರವಿ ಕಾಂಬ್ಳೆ ,ಶ್ರೀ ಎಸ್,ಎಸ್,ಸಿಂಪಿ ,ಶ್ರೀ ನಿಂಗಪ್ಪ ಚಲುವಾದಿ ಹಾಗೂ ಮುಂತಾದ ಪದಾಧಿಕಾರಿಗಳು ಈ ಆಚರಣೆ ಸಮಯದಲ್ಲಿ ಹಾಜರಿದ್ದರು.