SHARE

ಬೆಳಗಾವಿ: ಲಾಕಡೌನ್ ಮಧ್ಯೆ ಮದ್ಯಪ್ರಿಯರಿಗೆ ಚಡಪಡಿಕೆ ಆಗಿದ್ದು, ನಿಷೇಧದ ಮಧ್ಯೆಯೂ ಭಾರಿ ಮದ್ಯ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ ನಡೆಸಿದ 530 ದಾಳಿ ವೇಳೆ ಭಾರಿ ಮದ್ಯ ಸಿಕ್ಕಿದೆ.63 ಪ್ರಕರಣಗಳನ್ನು ದಾಖಲಿಸಲಾಗಿದೆ. 42 ದ್ವಿಚಕ್ರ ವಾಹನ, ಒಂದು ಕಾರು, ಎರಡು ಅಟೋರಿಕ್ಷಾ, ಮೂರು ಗೂಡ್ಸ್ ವಾಹನ ಸೇರಿ ಈ 51 ಆಟೊಮೊಬೈಲ್ಸ್ ಮೌಲ್ಯ 20 ಲಕ್ಷ ಎನ್ನಲಾಗಿದೆ. ಅದರಲ್ಲಿ ಮದ್ಯ, ಬಿಯರ್ ಎಣ್ಣೆಗಳ ಮೌಲ್ಯ ₹ 50 ಲಕ್ಷ ಎಂದು ಅಂದಾಜಿಸಲಾಗಿದೆ. 34 ಆರೋಪಿತರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.