SHARE

ಬೆಳಗಾವಿ: ಜಿಲ್ಲೆಯ ಶಿರೂರು ಗ್ರಾಮದ ಬಳಿ ಇರುವ ಮಾರ್ಕಂಡೇಯ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಯವರು ಇಂದು ಭೇಟಿ ನೀಡಿದರು. ಜಲಾಶಯದ ನೀರಿನ ಮಟ್ಟವನ್ನು ಪರಿಶೀಲನೆ ಮಾಡಿದರು. ಈ ಭಾಗದ ಕುಡಿಯುವ ನೀರಿನ ಸರಬರಾಜು ಕುರಿತಂತೆ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಚಿವರು ‌ಸಭೆ ನಡೆಸಿ‌ ಚರ್ಚಿಸಿದರು.