SHARE

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ(ಏ.24) ಮತ್ತೇ ಇಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ರಾಯಬಾಗ ತಾಲ್ಲೂಕಿನ ಈ ಹೊಸ ಎರಡು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 45 ಕ್ಕೆ ಏರಿದಂತಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ (ಏ.24) ಬೆಳಿಗ್ಗೆಯ ಪತ್ರಿಕಾ ಪ್ರಕಟಣೆಯ ಪ್ರಕಾರ ಬೆಳಗಾವಿಯಲ್ಲಿ 2 ಪ್ರಕರಣಗಳು ದೃಢಪಟ್ಟಿರುತ್ತವೆ. ರಾಯಬಾಗ ತಾಲ್ಲೂಕಿನ 10 ವರ್ಷದ ಬಾಲಕಿ (ಪಿ-448) ಹಾಗೂ 15 ವರ್ಷದ ಬಾಲಕ (ಪಿ-463)ನಲ್ಲಿ ಸೋಂಕು ಪತ್ತೆಯಾಗಿರುತ್ತದೆ. ಈ ಇಬ್ಬರು ಕ್ರಮವಾಗಿ ಪಿ-150 ಹಾಗೂ ಪಿ-148 ರ ಜತೆ ಸಂಪರ್ಕಕ್ಕೆ ಬಂದಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 45 ಜನರಲ್ಲಿ ಸೋಂಕು ಕಂಡುಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. ಈ ಪೈಕಿ ಗುಣಮುಖರಾಗಿರುವ ಮೂವರನ್ನು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ.