SHARE

ಬೆಳಗಾವಿ: ಕೇಂದ್ರ ಸರಕಾರದ ಉಜ್ವಲಾ ಯೋಜನೆಯಲ್ಲಿ ಮೂರು ತಿಂಗಳು ಕೊಡಲಾಗುತ್ತಿರುವ ಉಚಿತ LPGಗ್ಯಾಸ್ ಜನ ಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ. ಇಂದು ಸುದ್ದುಗೋಷ್ಠಿಯಲ್ಲಿ ಮಾತನಾಡಿದ ಅವರು 8 ಕೋಟಿ ಉಜ್ವಲಾ ಫಲಾನುಭವಿಗಳಿಗೆ 14.2ಕೆಜಿ ಸಿಲಿಂಡರ್ ಮನೆಮನೆಗೆ ಒದಗಿಸಲಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ 2.51 ಲಕ್ಷ ಗ್ರಾಹಕರು ಫಲಾನುಭವಿಗಳಿದ್ದು ಇಲ್ಲಿಯವರೆಗೆ ಬರೀ ಶೇ. 46ಜನ ಮಾತ್ರ ಸಿಲಿಂಡರ್ ಪಡೆದಿದ್ದಾರೆ. ಇನ್ನೂ ಶೇ. 54ರಷ್ಟು ಜನ ಸಿಲಿಂಡರ್ ಪಡೆಯಬೇಕು ಎಂದು ಕರೆ ನೀಡಿದರು. ಪ್ರತಿ ಫಲಾನುಭವಿ ಕುಟುಂಬ ಸೇರಿ ಈಗಾಗಲೇ ಜಿಲ್ಲೆಗೆ 17ಕೋಟಿಯಷ್ಟು ಹಣ ಬಿಡುಗಡೆ ಆಗಿದೆ ಎಂದರು.
ಇಂಡಿಯನ್ ಆಯಿಲ್ ಮುಖ್ಯ ಪ್ರಬಂಧಕ ವಿ. ರಮೇಶ ಬಾಬು ಇತರರು ಉಪಸ್ಥಿತರಿದ್ದರು.