SHARE

ಬೆಳಗಾವಿ: ಲಾಕಡೌನ್ ಮತ್ತು ಸಾಮಾಜಿಕ ಅಂತರ ಕಾಯಲು ದೇಶಾದ್ಯಂತ ಸಮರ ನಡೆದಿರುವಾಗ, ಇದರ ಬಗ್ಗೆ ಎಳ್ಳಷ್ಟು ಕ್ಯಾರೆ ಎನ್ನದ ಒಂದು ಕೋಮಿನ 23 ಜನ ಒಂದೇ ಅಂಬ್ಯುಲೆನ್ಸ ನಲ್ಲಿ ಸಾಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕಠಿಣ ಬಂದೋಬಸ್ತ್ ಏರ್ಪಡಿಸಿರುವ ಪೊಲೀಸರು ನಗರದ ಚನ್ನಮ್ಮ ವೃತ್ತದಲ್ಲಿ ಕುಳಿತಿದ್ದಾಗ ಸಿವಿಲ್ ಆಸ್ಪತ್ರೆ ಮಾರ್ಗದಿಂದ ಚನ್ನಮ್ಮ ವೃತ್ತದತ್ತ ಆಗಮಿಸಿ ಕ್ಯಾಂಪನತ್ತ ಹೊರಟಿದ್ದ ಅಂಬ್ಯಲೆನ್ಸ್ ಅನ್ನು ಎಸಿಪಿ ಎನ್. ವಿ. ಬರಮನಿ ನೇತೃತ್ವದ ತಂಡ ತಡೆ ಹಿಡಿದು ವಿಚಾರಿಸಿ ದಿಗ್ಭ್ರಮೆ ವ್ಯಕ್ತಪಡಿಸಿತು.

ಅಂಬ್ಯಲೆನ್ಸ್ ತುಂಬ ಒತ್ತಿಕುಳಿತವರು ಶವ ಅಂತ್ಯಸಂಸ್ಕಾರಕ್ಕೆ ತೆರಳಿದ್ದರು ಎಂದು ಈ ಸಮಯ ಹೇಳಿದ್ದಾರೆ. ಪೊಲೀಸರು ತೀವ್ರ ಆಕ್ಷೇಪ ಹಾಗೂ ಆತಂಕ ವ್ಯಕ್ತಪಡಿಸಿದ್ದು, ಮಾರ್ಕೇಟ್ ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಡೀ ದೇಶವನ್ನು ಲಾಕಡೌನ್ ಮಾಡಲಾಗಿದೆ. ಬೆಳಗಾವಿ ರೆಡ್ ಜೋನ್ ಘೋಷಣೆ ಆಗಿದೆ, ಇಡೀ ಸಮಾಜದ ಆತಂಕದ ಜೀವನ ನೂಕುತ್ತಿದೆ. ಇಂತಹ ಸಂದರ್ಭವೂ ಎಳ್ಳಷ್ಟು ಅಳಕಿಲ್ಲದೇ ಒತ್ತೊತ್ತಾಗಿ ತುಂಬಿ ಕುಳಿತು ಸಾಗಿ ಆತಂಕ ಸೃಷ್ಟಿಸಿದರು. ಎಸಿಪಿ ಮಹಾಂತೇಶ್ವರ ಜಿದ್ದಿ, ಎಸಿಪಿ ಚಂದ್ರಪ್ಪ, ಇನ್ಸಪೆಕ್ಟರ್ ಧೀರಜ್ ಸಿಂಧೆ, ಸಂಗಮೇಶ ಶಿವಯೋಗಿ, ಎಸ್. ಕರಿಕಲ್ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.