SHARE

ಬೆಳಗಾವಿ: ಗೋಲಿಹಳ್ಳಿ ವಲಯದ ಅವರೊಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿ ಕುರಿ ಹೊತ್ತೊಯ್ಯುವ ವಿಫಲ ಯತ್ನ ನಡೆಸಿದೆ. ಚಿರತೆ ದಾಳಿಯಿಂದ ಜನ ಭಯಭೀತರಾದರು, ವಿಷಯ ತಿಳಿದ ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿದರು. ಚಿರತೆ ದಾಳಿ ಮಾಡಿರುವ ಪ್ರಾಥಮಿಕ ಅಂದಾಜು ಇದೆ, ಗ್ರಾಮಸ್ಥರು ಸಹ ನಿಖರವಾಗಿ ಚಿರತೆ ಬಗ್ಗೆ ತಿಳಿಸಿದ್ದಾರೆ. ಮತ್ತೊಂದು ಕುರಿ ಕಟ್ಟಿ, ಬೋನು ಇರಿಸುವ ಮೂಲಕ ಚಿರತೆ ಸೆರೆ ಹಿಡಿಯಲು ತಡರಾತ್ರಿ ಯೋಜನೆ ರೂಪಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀಕಾಂತ ಕಡೋಲಕರ ತಿಳಿಸಿದ್ದಾರೆ.