SHARE

ಬೆಳಗಾವಿ: ವಿಶೇಷ ಪ್ರಕರಣದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂಧಿ ಪ್ರತಿ ಮನೆಯಿಂದ ಚಪಾತಿ, ಭಾಜಿ ತಯಾರಿಸಿ 600ಕ್ಕೂ ಹೆಚ್ಚು ಉತ್ತರ ಪ್ರದೇಶ ಕಾರ್ಮಿಕರಿಗೆ ಬಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಉತ್ತರ ಭಾರತೀಯ ಕಾರ್ಮಿಕರ ನೊಂದಣಿ ಹಾಗೂ ಕ್ವಾರಂಟೈನ್ ಕೆಲಸ ನಡೆದಿದ್ದು, ನೂರಾರು ಕಾರ್ಮಿಕರು ತಮ್ಮ ಊರು ತಲುಪುವ ಕನಸಿನ ಸಾಲುಗಟ್ಟಿದ್ದಾರೆ.

ಜಿಲ್ಲಾಡಳಿತ ಮಹಾನಗರ ಪಾಲಿಕೆ ಮೂಲಕ ಅವರಿಗೆ ಆಹಾರ ವ್ಯವಸ್ಥೆ ಮಾಡಿದೆ. ಆದರೂ ಯುಪಿ ಕಾರ್ಮಿಕರ ಮನದಿಚ್ಛೆಯ ಸಬ್ಜಿ-ಚಪಾತಿ-ಜುನಕಾ ಬಡಿಸುವ ಕಾರ್ಯ ನಡೆದಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು & ಸಿಬ್ಬಂದಿ ತಮ್ಮ ತಮ್ಮ ಮನೆಯಿಂದ ಪ್ರತಿಯೊಬ್ಬರು 50 ಚಪಾತಿ ಮತ್ತು ಪಲ್ಯ ತಯಾರಿಸಿ ತಂದಿದ್ದರು. ಮಹಾನಗರ ಪಾಲಿಕೆ ಉಪ ಆಯುಕ್ತ ಎಸ್. ಬಿ. ದೊಡ್ಡಗೌಡರ, ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ, ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂಧಿಹಟ್ಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೊಗೂರ, ತಬಸಮ್ ಬಿ, ಎ. ಎಲ್. ಗಡದವರ, ಅನಿಲ ಬಗಟಿ, ಸಂಜೀವ ಭೋಸಲೆ, ರಮೇಶ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.