SHARE

ಬೆಳಗಾವಿ: ಗುರುವಾರ ಬಿಡುಗಡೆಯಾದ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 9 ಜನರಲ್ಲಿ ಸೊಂಕು ಪತ್ತೆಯಾಗಿದೆ. ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 125ಕ್ಕೇ ಏರಿದಂತಾಗಿದೆ.

ರಾಜ್ಯದಲ್ಲಿ ಇಂದು ಒಟ್ಟೂ 116 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 9, ಉತ್ತರ ಕನ್ನಡದಲ್ಲಿ 9, ಹಾಸನದಲ್ಲಿ 13, ಉಡುಪಿಯಲ್ಲಿ 25, ದಕ್ಷಿಣ ಕನ್ನಡದಲ್ಲಿ 6, ಧಾರವಾಡದಲ್ಲಿ 5 , ಬೆಂಗಳೂರಿನಲ್ಲಿ 6, ಬಳ್ಳಾರಿಯಲ್ಲಿ 11, ಶಿವಮೊಗ್ಗದಲ್ಲಿ 6, ಮಂಡ್ಯದಲ್ಲಿ 15 ಜನರಲ್ಲಿ ಸೋಂಕು ಪತ್ತೆಯಾಗಿದೆ.