SHARE

ಬೆಳಗಾವಿ: ಮಹಾರಾಷ್ಟ್ರ ಗಡಿ ಅಂತರಾಜ್ಯ ತಪಾಸಣಾ ಕೇಂದ್ರ (ಚೆಕ್ ಪೋಸ್ಟ್) ಉದ್ದಕ್ಕೂ ಜಿಲ್ಲಾಡಳಿತ ಕೈಗೊಂಡ ಕ್ರಮಗಳಿಗೆ ಬಾಯ್ತುಂಬ ಶ್ಲಾಘಿಸಿ ರಾಜ್ಯ ಗುಪ್ತವಾರ್ತೆ ಎಡಿಜಿಪಿ ಕಮಲಪಂತ ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಅವರಿಗೆ ಶುಭಾಶಯ ಕೋರಿದ್ದಾರೆ.

ಅಂತರರಾಜ್ಯ ಕೋವಿಡ್ 19 ಸರ್ವಲೆನ್ಸ್ ಚೆಕ್ ಪೋಸ್ಟ್ ನಿಪ್ಪಾಣಿ-ಕುಗನೊಳ್ಳಿಯಲ್ಲಿ ಮಾಡಲಾದ ವ್ಯವಸ್ಥೆಯ ಚಿತ್ರಗಳು ತಮ್ಮ ಮನಸ್ಸು ಗೆದ್ದಿರುವುದಾಗಿ ಎಡಿಜಿಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚೆಕಿಂಗ್ ಪೋಸ್ಟನಲ್ಲಿ ಲಾಕಡೌನ್ ಸಡಿಲಿಕೆ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಏರ್ಪಾಡು ಮಾಡಲಾಗಿತ್ತು ಇದು ಸೂಕ್ತ ಪೂರ್ವ ತಯಾರಿ & ಸಮಯೋಚಿತ ಆಡಳಿತದ ನಡೆ ಎಂದಿದ್ದಾರೆ. ಮಹಾರಾಷ್ಟ್ರ ಸೇರಿ ಅನ್ಯ ರಾಜ್ಯಗಳಿಂದ ಆಗಮಿಸಿರುವ ಪ್ರಯಾಣಿಕರಿಗೆ ಅಂತರರಾಜ್ಯ ತಪಾಸಣಾ ಕೇಂದ್ರದಲ್ಲಿ ಮೂಲಸೌಕರ್ಯ ಒದಗಿಸಿದ್ದು ವಂದನಾರ್ಹ ಇದಕ್ಕಾಗಿ ತಮಗೆ ಶ್ಲಾಘಿಸುತ್ತೇನೆ ಎಂದು ಎಡಿಜಿಪಿ ಪತ್ರದಲ್ಲಿ ತಿಳಿಸಿದ್ದಾರೆ.