SHARE

ಬೆಳಗಾವಿ: ಪೆಂಡಾಮಿಕ್ ಕೊರೋನಾ ತಡೆಗಟ್ಟಲು ಜಿಲ್ಲಾಡಳಿತಕ್ಕೆ ಬೆನ್ನೆಲುಬಾಗಿ ಪೊಲೀಸಿಂಗ್ ನಿರ್ವಹಿಸಿದ್ದಕ್ಕಾಗಿ ನೆಟ್ಟಿಗರು ಡಿಸಿಪಿ ಸೀಮಾ ಲಾಟಕರ ಅವರಿಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.The way you are handling the situation is highly admirable ಎಂದು ಬಿ. ಡಿ. ಪಾಟೀಲ ಎಂಬುವವರು ಟ್ವೀಟ್ ಮಾಡಿದ್ದರೆ, You are inspirational example for everyone, taking care of Belgaum ಎಂದು ಸುಹಾಸ ದೇಶಪಾಂಡೆ ಎಂಬುವವರು,ಹಾಗೂ you and your police team have been doing absolutely great job for the humanity & city, state, nation ಎಂದು ಕೈಲಾಶ ಶರ್ಮಾ ಎಂಬುವರು ಸೇರಿ ನೂರಾರು ಜನ ಪೊಲೀಸ್ ಕೆಲಸಕ್ಕೆ ಟ್ವೀಟ್ ಮೂಲಕ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಪೊಲೀಸ್ ಆಯುಕ್ತ ಲೊಕೇಶಕುಮಾರ ತಂಡ ಸಹ ಸಾರ್ವಜನಿಕ ಪ್ರಶಂಸೆಗೆ ಒಳಗಾಗಿರುವುದು ಈಗ ಗಮನ ಸೆಳೆದಿದೆ. ಪೊಲೀಸ್ ಉನ್ನತಾಧಿಕಾರಿಯಿಂದ ಸಿವಿಲ್ ಮುಖ್ಯಸ್ಥನಿಗೆ(DC) ಹಾಗೂ ನಾಗರಿಕರಿಂದ ಪೊಲೀಸ್ ಸುಪ್ರಿಂಟಂಡೆಂಟ್ (DCP)ಗೆ ಕೋವಿಡ್-19 ಜವಾಬ್ದಾರಿಯುತ ಕೆಲಸ ನಿರ್ವಹಿಸಿದ್ದಕ್ಕೆ ಮೆಚ್ಚುಗೆ ಸಿಕ್ಕಿದೆ.