SHARE

ಬೆಳಗಾವಿ:ತನ್ನ ಸಂಕಷ್ಟದ ನಡುವೆಯೂ ಪ್ರಧಾನಿ ಪರಿಹಾರ ನಿಧಿಗೆ ₹1 ಲಕ್ಷ ನೀಡಿದ ಹಿರಿಯ ಅಜ್ಜಿ ಒಬ್ಬರಿಗೆ ಕೇಂದ್ರ ಸಚಿವ ಸುರೇಶ ಅಂಗಡಿ ವಂದನೆ ಸಲ್ಲಿಸಿದರು. ಕಳೆದ 20ವರ್ಷಗಳಿಂದ ದೈಹಿಕ ಅಂಗವಿಕಲತೆಯಿಂದ ಬಳಲುತ್ತಿರುವ ಇಲ್ಲಿನ ಸ್ವಾಧ್ಯಾಯ ವಿದ್ಯಾ ಕೇಂದ್ರದ ವಿಶ್ರಾಂತ ಗ್ರಂಥಪಾಲಕಿ, ನಗರದ ಟಿಳಕವಾಡಿ ನಿವಾಸಿ ನಳಿನಿ ಕೆಂಭಾವಿ ಅವರು ಕೊರೋನಾ ಮಹಾಮಾರಿಯಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸಲು PM Care fund ಗೆ ರೂ.1,00,000 ಹಣವನ್ನು ದೇಣಿಗೆ ನೀಡಿದ್ದರು. ಈ ಆದರ್ಶವನ್ನು ಮಾನ್ಯ ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಸ್ವತಃ ಅವರ ಮನೆಗೆ ಭೇಟಿ ನೀಡಿ ಅವರ ಕೊಡುಗೆಗೆ ಶಾಘ್ಲೀಸಿ ಧನ್ಯವಾದ ಅರ್ಪಿಸಿದರು. ಸ್ವಾವಲಂಬಿ ಭಾರತಕ್ಕೆ ಇಂತಹ ಮಹಾನ್ ವ್ಯಕ್ತಿಗಳೇ ನಮಗೆಲ್ಲಾ ಪ್ರೇರಣಾದಾಯಿ ಎಂದು ಸುರೇಶ ಅಂಗಡಿ ಹೇಳಿದರು. ಅಶೋಕ್ ಪೋತದಾರ, ಪ್ರೊ.ಕೆಂಬಾವಿ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು