SHARE

ಬೆಳಗಾವಿ: ಪ್ರಖ್ಯಾತ ಕವಿ ಚೆನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ಅವರು ಇಂದು ಸಂಜೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ಶಾಂತಾದೇವಿ ಕಣವಿ ಯವರು ಅನೇಕ ಕಥೆ, ಲೇಖನ ಗಳನ್ನು ಬರೆದು ಸಾಹಿತ್ಯ ಲೋಕವನ್ನು ಸಿರಿವಂತಗೊಳ್ಳಿಸಿದವರು. ಅವರ ಅಂತ್ಯ ಕ್ರಿಯೆ ನಾಳೆ ಧಾರವಾಡ ದಲ್ಲಿ ಜರುಗಲಿದೆ.