SHARE

ಬೆಂಗಳೂರು: ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ 1 ಸೇರಿ ಒಟ್ಟು 196 ಜನರಿಗೆ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1939 ಆಗಿದೆ. ಯಾದಗಿರಿಯಲ್ಲಿ 75 ಜನರಿಗೆ ಸೋಂಕು ಪತ್ತೆಯಾಗಿದೆ. ಉತ್ತರ ಕನ್ನಡದಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ. ಮಂಡ್ಯದಲ್ಲಿ 28, ಗದಗದಲ್ಲಿ 15, ಚಿಕ್ಕ ಬಳ್ಳಾಪುರದಲ್ಲಿ 20, ಬೆಂಗಳೂರಲ್ಲಿ 4 ಜನರಿಗೆ ಸೋಂಕು ತಗುಲಿದೆ.