SHARE

ಬೆಳಗಾವಿ: ಸರಕಾರದ ಆದೇಶದಂತೆ ಭಾನುವಾರ ಲಾಕಡೌನ್ ಕಟ್ಟುನಿಟ್ಟಾಗಿ ಪಾಲನೆಯಾಗಲಿದ್ದು, ನಾಗರಿಕರು ಯಾವುದೇ ಕಾರಣಕ್ಕೂ ಹೊರ ಬೀಳುವಂತಿಲ್ಲ. ಇಂದು ಸಂಜೆಯಿಂದಲೇ ಸೋಮವಾರ ಬೆಳಗಿನ 7ರವರೆಗೆ ಜನ ಹೊರಬೀಳದಂತೆ ಜಿಲ್ಲಾಧಿಕಾರಿ ಡಾ.ಎಸ್. ಬಿ. ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಮೇ. 31ರ ವರೆಗೆ ಬರುವ ಪ್ರತಿ ಎಲ್ಲ ಭಾನುವಾರಗಳಂದು ‘ಝೀರೊ ಜನಸಂಚಾರ’ದ ಲಾಕಡೌನ್ ಆದೇಶ ಜಾರಿಯಾಗಿದೆ.

ಅಗತ್ಯ ಕೆಲಸ ನಿಮಿತ್ತ ಸರಕಾರಿ ಸಿಬ್ಬಂಧಿ ಹಾಗೂ ಮಾಧ್ಯಮಗಳನ್ನು ಹೊರತುಪಡಿಸಿ ಇನ್ನಿತರರು (Non Essentials) ಮನೆಯಿಂದ ಹೊರಬೀಳುವಂತೆಯೇ ಇಲ್ಲ. ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಸ್ಥಬ್ದವಾಗಲಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಾಗಿ ವರ್ತಿಸಲಿದ್ದಾರೆ. ಹಾಲು & ಔಷಧಿಗೆ ಅನುಮತಿಸಲಾದರೂ ನೆವ ಮಾಡಿ ಯಾವುದೇ ನರಮನುಷ್ಯ ಹೊರಬಂದರೆ ‘ಕರ್ಫ್ಯೂ ಕಷ್ಟ’ಕ್ಕೆ ಬೀಳುವುದು ಖಚಿತ. ಭಾನುವಾರ ಲಾಕ್ ಡೌನ್ ಹಿನ್ನಲೆಯಲ್ಲಿ ಶನಿವಾರ ಸಂಜೆಯೇ ನಗರ ಪೊಲೀಸ್ ಕಮಿಷ್ನರೇಟ್ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ತಯಾರಿ ಮಾಡಿಕೊಳ್ಳಲಾಯಿತು.