SHARE

ಖಾನಾಪುರ: ಕಳೆದ ಎರಡು ತಿಂಗಳಿನಿಂದ ಕೋವಿಡ್-೧೯ ಮಹಾಮಾರಿಯಿಂದ ವಿಧಿಸಿದ ಲಾಕ್ ಡೌನ್ ಹೊಡೆತಕ್ಕೆ ಜೀವನ ನಿರ್ವಹಣೆಗೆ ಪರದಾಡುತ್ತಿರುವ ಲಿಂಗನಮಠ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಲಿಂಗನಮಠ, ಹೊಸಲಿಂಗನಮಠ ಮತ್ತು ವಾಲ್ಮೀಕಿನಗರ ಗ್ರಾಮದಲ್ಲಿರುವ ಪ್ರತಿ ಮನೆ ಮನೆಗೆ ಉಪಯೋಗ ಆಗುವಂತೆ ಮಾನವೀಯ ದೃಷ್ಟಿಯಿಂದ ಲಿಂಗನಮಠದ ಸಮಾಜ ಸೇವಕ ಹಸನ ಶೇಖ ಅವರು ಸುಮಾರು ನಿರ್ಗತಿಕ ಕುಟುಂಬಗಳಿಗೆ ಮನೆ-ಮನೆಗೆ ಭೇಟಿ ಕೊಟ್ಟು ದಿನಸಿ ವಸ್ತುಗಳ ಕಿಟ್ ವಿತರಿಸಿದರು. ಬಳಿಕ ಕೋರೋನಾ ಸಾಂಕ್ರಾಮಿಕ ರೋಗದಿಂದ ದೂರ ಇರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಕಡ್ಡಾಯವಾಗಿ ಮಾಸ್ಕ್ ಧರಿಸಲು, ಚಿಕ್ಕಮಕ್ಕಳು ಮತ್ತು ೬೫ ವಯಸ್ಸಿನ ವೃದ್ಧರ ಕುರಿತು ವಿಶೇಷ ಕಾಳಜಿ ವಹಿಸಿ ಸರಕಾರದ ಕೋವಿಡ್ ನಿಯಂತ್ರಣ ಕಾರ್ಯಕ್ರಮಕ್ಕೆ ಆರೋಗ್ಯ, ಪೋಲಿಸ್, ಆಶಾ ಕಾರ್ಯಕರ್ತೆಯರು ಮುಂತಾದ ಕೋವಿಡ್ ವಾರಿಯರ್ಸ್ ಜತೆ ಮಾನವೀಯತೆಯಿಂದ ಸಹಕರಿಸಿ ಮಹಾಮಾರಿ ವಿರುದ್ಧದ ಹೋರಾಟಕ್ಕೆ ಸಹಕರಿಸಲು ನಾಗರಿಕರಲ್ಲಿ ಗ್ರಾಮದ ಸಮಾಜ ಸೇವಕ, ಹಸನ ಹೇಳಿದರು.

ಈ ಸಂದರ್ಭದಲ್ಲಿ ದಿನಸಿ‌ ಕಿಟ್ ವಿತರಣೆಯ ಅವರ ಅಭಿಮಾನಿಗಳಾದ ಇಕಬಾಲ ದಾದೂನವರ, ದೀಪಕ ಮಾಟೋಳ್ಳಿ, ಮಂಜುನಾಥ ಮಾದರ, ಮೈಕಲ ಫರ್ನಾಂಡಿಸ, ಪ್ರಭು ಮಾಟೋಳ್ಳಿ ಲಿಂಗನಮಠ,‌ ಹೊಸಲಿಂಗನಮಠ ಹಾಗೂ ವಾಲ್ಮೀಕಿನಗರ ಗ್ರಾಮದ ಯುವಕರು ಉಪಸ್ಥಿತರಿದ್ದರು.