SHARE

ಬೆಳಗಾವಿ: ‘ಆಯುಷ್ ಪದ್ಧತಿ ಮೂಲಕ ರೋಗನಿರೋಧಕ ಶಕ್ತಿ’ ವಿಷಯವಾಗಿ ನಗರದ ಭರತೇಶ ಹೊಮಿಯೋ ಮಹಾವಿಧ್ಯಾಲಯ ಕಾರ್ಯಕ್ರಮ ನೆಡೆಸಿ ಔಷಧಿ ವಿತರಿಸಿತು.ಇಂದು ಬೆಳಗಾವಿ ಸಾರಿಗೆ ಡಿಪೊ 01ರಲ್ಲಿ 500 ಔಷಧಿ ಕಿಟಗಳನ್ನು ವಿತರಿಸಲಾಯಿತು.ಅರ್ಸೆನಿಕಮ್ ಅಲ್ಬಮ್ ೩೦ ಮಾತ್ರೆಗಳನ್ನು ಕಚೇರಿ ಕೆಲಸಗಾರರು, ಡ್ರೈವರ್ಸ್, ಕಂಡಕ್ಟರ್ಸ್, ಮೆಕಾನಿಕಲ್ಸ್, ಸೆಕ್ಯುರಿಟಿ ಗಾರ್ಡ್ಸ್ ಕೆಲಸಗಾರರಿಗೆ ಇಂದು ವಿತರಿಸಲಾಯಿತು.

ಅರ್ಸೇನಿಕಮ್ ಅಲ್ಬಮ್ ಮಾರ್ರೆ ದೊಡ್ಡವರು 5 ಹಾಗೂ ಚಿಕ್ಕವರು ದಿನಕ್ಕೆ 3 ಬಾರಿ ಬೆಳಿಗ್ಗೆ ಖಾಲಿ ಹೊಟ್ಟೆಯಿಂದ ಪಡೆಯುವಂತೆ ಡಾ. ಬಸವರಾಜ ಆದಿ ಸಲಹೆ ನೀಡಿದರು. ಸಾರಿಗೆ ಡಿಸಿ ಮಹಾದೇವ ಮುಂಜಿ, ಡಾ. ಇಂದಿರಾ ಕುಲಕರ್ಣಿ, ಡಾ. ಸಾಗರ ಪಾಟೀಲ, ಡಾ. ದೀಪಕ ಮುತಗಿ, ಸತ್ಯನಾರಾಯಣ, ನಿತಿನ್ ಗಡದೆ, ಬಿ. ಡಿ. ಗುರಿಕಾರ ಇತರರು ಉಪಸ್ಥಿತರಿದ್ದರು.