SHARE

ಬೆಳಗಾವಿ:ಬಿಜೆಪಿ ಸರಕಾರದ ಭೂ ಸುಧಾರಣಾ ತಿದ್ದುಪಡಿ ಸುಗ್ರೀವಾಜೆ ಯತ್ನ ಬಡ ಕೃಷಿಕರು, ದಲಿತರು, ಚಿಕ್ಕಹಿಡುವಳಿದಾರರು, ಕೂಲಿಕಾರ್ಮಿಕರಿಗೆ ಮಾರಕವಾಗಿದ್ದು, ಶ್ರೀಮಂತರು ಕೇಕೆ ಹಾಕುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಆತಂಕ ವ್ಯಕ್ತಪಡಿಸಿದರು.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿಕಳೆದ ಜೂ. 11ರಂದು ರಾಜ್ಯ ಸರಕಾರದ ಕ್ಯಾಬಿನೆಟ್ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ನಿರ್ಧರಿಸಿ ಆ ಬಗ್ಗೆ ಜಾರಿಗೆ ತರುವ ಯತ್ನ ನಡೆಸಿದೆ.

ಈಗಾಗಲೇ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ರಾಜ್ಯ ಮುಖಂಡರು ಸರಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
1961ರ ಭೂ ಸುಧಾರಣಾ ಕಾಯ್ದೆಗೆ 1974ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು ಕಲಂ 71A, 71B, 71C, 80, 63 ಸೇರಿದಂತೆ ಇತರ ಕಲಂ ಸೇರಿಸಿ ಸುಧಾರಣೆ ತಂದಿದ್ದರು. ಅಂದು ಭೂ ಹಿಡುವಳಿಗೆ ಮಿತಿಯನ್ನು ಹಾಕಿದ್ದರು. ಜಮೀನಿನಿ ಸಮರ್ಪಕ ಹಂಚಿಕೆ ಆಗಬೇಕು ಎಂದು ಅಂದು ದೇವರಾಜ ಅರಸ್ ಬಯಸಿದ್ದರು. ಈ ಭೂಸುಧಾರಣೆ ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯ ಆಶಯವಾಗಿತ್ತು. ರೈತರು, ಕೃಷಿ ಕೂಲಿ ಕಾರ್ಮಿಕರಿಗೆ ಜಮೀನು ಹಂಚುವ ಆಶಯದ ಈ ಐತಿಹಾಸಿಕ ನಿರ್ಣಯವಾಗಿತ್ತು.

ನಮ್ಮ ದೇಶ ಕೃಷಿ ಪ್ರಧಾನ ದೇಶ ನಮ್ಮಲ್ಲಿ ಕೃಷಿಕನಿಗೆ ಯೋಗ್ಯ ಗೌರವ ಮತ್ತು ಸಹಾಯ ಸಿಗಬೇಕು ಎಂಬ ಹಿನ್ನೆಲೆ ಇರುವಾಗ ಇಂದು ಅದೇ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜಞೆ ತಂದು ಸಂವಿಧಾನ ಆಶಯ, ಸ್ವಾತಂತ್ರ್ಯ ಚಳುವಳಿಯ ಆಶಯ ಹಾಗೂ ದೇವರಾಜ ಅರಸು ಅವರ ಆಶಯಕ್ಕೆ ಧಕ್ಕೆ ತರುವ ಕೆಲಸ ಇಂದುಬಿಜೆಪಿ ಸರಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
79A/79B ಉಲ್ಲಂಘನೆಯ 12ಸಾವಿರ ಪ್ರಕರಣಗಳು ದಾಖಲಾಗಿದ್ದು, ಇಂತಹ ಪ್ರಕರಣಗಳನ್ನು ಹಿಂಪಡೆಯುವ ಯತ್ನ ರಾಜ್ಯ ಬಿಜೆಪಿ ಸರಕಾರ ನಡೆಸಿದೆ ಎಂದರು.

ಸುಗ್ರೀವಾಜೆ ಜಾರಿಗೆ ಬಂದರೆ ಕೃಷಿಕರು, ಬಡವರು, ಕೂಲಿಕಾರ್ಮಿಕರು ಬೀದಿಗೆ ಬೀಳುತ್ತಾರೆ. ಬಡವರ ಜಮೀನು ಬಂಡವಾಳ ಶಾಹಿಗಳು, ಶ್ರೀಮಂತರು, ಮಾರವಾಡಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳ ಪಾಲಾಗುತ್ತದೆ, ಊಳಿಗಮಾನ್ಯ ಪದ್ಧತಿ ಮತ್ತೆ ತಿರುಗಿ ಬರುತ್ತದೆ ಎಂದು ಅರವಿಂದ ದಳವಾಯಿ ಆತಂಕ ವ್ಯಕ್ತಪಡಿಸಿದರು. ನ್ಯಾಯವಾದಿ ಆರ್. ಪಿ.ಪಾಟೀಲ, ಸಲೀಂ ಖತೀಬ್, ಲಗಮನ್ನಾ ಕಳಸದ ಇತರರು ಉಪಸ್ಥಿತರಿದ್ದರು.