SHARE

ಬೆಳಗಾವಿ: ಎಸಿಬಿ ತನ್ನ ಬಲೆ ಮುಂದುವರೆಸಿದ್ದು ಕೃಷಿ ಹೊಂಡದ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದ ಅಥಣಿ ತಾಪಂ. ಅಧಿಕಾರಿಯನ್ನು ಬಲೆಗೆ ಕೆಡವಿದೆ. ಅಥಣಿ ತಾಲೂಕಿನ ಅನಂತಪುರದ ಅಂಬರೀಶ ಸೋಮಲಿಂಗ ದುಗ್ಗಾನಿ ಎಂಬುವವರು ನೀಡಿದ ದೂರು ಆಧರಿಸಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು. ಅಥಣಿ ತಾಪಂ. ನರೇಗಾ ಎಂಜಿನೀಯರ್ ನಾಗಪ್ಪ ಭೀಮಪ್ಪ ಮೊಖಾಶಿ ಎಂಬಾತ ಬಿಲ್ ಪಾಸ್ ಮಾಡಲು ₹ 6000ಕ್ಕೆ ಬೇಡಿಕೆ ಇಟ್ಟು ಮೂರು ಸಾವೀರ ಪೀಕುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿತ ಎಂಜಿನೀಯರ್ ನಾಗಪ್ಪನನ್ನು ಲಂಚದ ಹಣದ ಸಮೇತ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಸಿಬಿ ಡಿಎಸ್ಪಿ ಶರಣಪ್ಪ, ಪಿಐಗಳಾದ ಎ. ಎಸ್. ಗುದಿಗೆಪ್ಪ, ಸುನೀಲಕುಮಾರ ಹಾಗೂ ಸಿಬ್ಬಂಧಿ ದಾಳಿ ನಡೆಸಿದ್ದರು.