SHARE

ಬೆಳಗಾವಿ: ಇಂದು ಪ್ರಾರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಒಬ್ಬಳು ಆತ್ಮಹತ್ಯೆಗೆ ಈಡಾಗಿದ್ದಾಳೆ. ನಗರದ ವಡಗಾವಿ ಕಲ್ಲೇಶ್ವರ ನಗರದ ಸುಜಾತಾ ಸುಭಾಷ ಢಗೆ(೧೬) ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಬನಶಂಕರಿ ಶಿಕ್ಷಣ ಸಂಸ್ಥೆಯಲ್ಲಿ ಸುಜಾತಾ ವ್ಯಾಸಂಗ ಮಾಡುತ್ತಿದ್ದಳು. ಶಹಾಪುರ ಠಾಣೆ ಪೊಲೀಸರು ಪರಿಶೀಲಿಸಿದರು.