SHARE

ಬೆಳಗಾವಿ: ನಗರದ ಖಾಸಗಿ ಆಸ್ಪತ್ರೆಯೊಂದರಿಂದ ಕೋವಿಡ್ ಟ್ರೀಟಮೆಂಟಗೆ ಪ್ರತಿದಿನದ ಬಿಲ್ ಆಕರಣೆಯ ಸುತ್ತೊಲೆ ಜನ ನೋಡಿದರೆ ಜನ ಕೊಪೀಸಿಕೊಳ್ಳುವ ಬದಲು ಮುಸಿ ಆಡುತ್ತಿದ್ದಾರೆ. ಸಾಮಾಜಿಕ ಮಿಡಿಯಾಗಳಲ್ಲಿ ಈ ಆಸ್ಪತ್ರೆಯ ಬಿಲ್ ಟಾರಿಫ್ ಸರ್ಕ್ಯೂಲರ್ ಪತ್ರ ರೊಯ್ಯನೇ ಹರಿದಾಡುತ್ತಿದ್ದು, ಈಗ ಸರಕಾರದ ಗಮನ ಸಹ ಸೆಳೆದಿದೆ.
ಈ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ತನ್ನ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂಧಿಗೆ ಸರ್ಕ್ಯೂಲರ್ ಹೊರಡಿಸಿ ಕೊವಿಡ್ ಚಿಕಿತ್ಸೆಗೆ ಅನುಸರಿಸಬೇಕಾದ ಬಿಲ್ ಮೊತ್ತದ ಸೂಚನೆ ನೀಡಿದ್ದಾರೆ. ಜೊತೆಗೆ ಕೆಳಗೆ ನೋಟ್ ಈ ತರಹ ಇದೆ….The charges does not include actuals, medicines and consumables etc ಎಂದು ಸೂಚಿಸಲಾಗಿದೆ.

ಪ್ರತಿದಿನದ ಈ ಆಸ್ಪತ್ರೆಯ ಚಾರ್ಜ್ ನೊಡೋಣ: ವೆಂಟಿಲೇಟರ್ ರಹಿತ ದರಪಟ್ಟಿ ಪ್ರತಿದಿನಕ್ಕೆ: ₹35000, ₹50000, 60000. ಹಾಗೂ ವೆಂಟಿಲೇಟರ್ ಸಹಿತ ಪ್ರತಿದಿನದ ದರಪಟ್ಟಿ: ₹50000, 65000 ಹಾಗೂ 75000 ಈ ರೀತಿ ಇರುವುದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಈ ಆಸ್ಪತ್ರೆ ಹೆಸರಿನ ಸುತ್ತೊಲೆಯ ಒಳನೋಟ. ಜು. 23ರ ಗುರುವಾರ ಹೊರಡಿಸಲಾದ ಈ ಸುತ್ತೊಲೆ ಈಗ ಸಾರ್ವಜನಿಕರ ಮೊಬೈಲಗಳಿಗೆ ತಲುಪಿದೆ.

ಈ ಸುತ್ತೊಲೆ ಮೇಲೆ ವೈದ್ಯಕೀಯ ನಿರ್ದೇಶಕನ ಸಹಿ, ಸಂಸ್ಥೆಯ ಮೊಹರು, ಲೆಟರ್ ನಂಬರ ಜೊತೆಗೆ ಇನವಾರ್ಡ್ ಸೀಲ್ ಸಹ ಬಿದ್ದಿದೆ.
ಆಡಳಿತ ಪಕ್ಷದ ರಾಜಕೀಯ ನಾಯಕನ ಹೆಸರಿನ ತಲೆಬರಹ ಹೊತ್ತ ಈ ಆಸ್ಪತ್ರೆ ಪತ್ರ ಸರಕಾರವನ್ನು ಪೇಚಿಗೆ ಸಿಲುಕಿಸಿದೆ. ಬೆಳಗಾವಿ ನಗರದಲ್ಲಿ ಸ್ಟಾರ್ ಹೊಟೇಲ್ ಸೂಟ್ ರೂಂಗಳ ಬೆಲೆ ಸಹ ಪ್ರತಿದಿನಕ್ಕೆ ಹತ್ತುಸಾವಿರ ಮೇಲ್ಪಟ್ಟಿಲ್ಲ, ಎಂಬುವುದು ಗಮನಾರ್ಹ. ಬೆಳಗಾವಿ ಜಿಲ್ಲಾಧಿಕಾರಿ ಇದರ ವಿರುದ್ಧ ತೀಕ್ಷ್ಣ ನಿರ್ಧಾರದ ಜೊತೆಗೆ ಡಿಸಾಸ್ಟರ್ ಅಸ್ತ್ರ ಈ ಲೆಟರ್ ಬೆನ್ನುಹತ್ತಿ ಪ್ರಯೋಗಿಸದಿದ್ದರೆ ಡಿಸಿ ಸುತ್ತವೇ ಸಂಶಯದ ಹುತ್ತ ಬೆಳೆಯಲಿದೆ.‌ ಈ ಸುತ್ತೊಲೆ ಹೊರಜಗತ್ತಿಗೆ ಬಂದು ಹರಿದಾಡದಿದ್ದರೆ ರೋಗಿಗಳು ಮತ್ತು ಅವರ ಅವಲಂಬಿತರ ಕಥೆ ಮನೆಮುರಿದುಕೊಂಡು ಕರೋನಾದೊಂದಿಗೇ ಸಮಾಪ್ತಿ ಆಗುತ್ತಿತ್ತು ಎಂದು ಜನ ಆಡಿಕೊಳ್ಳುತ್ತಿದ್ದಾರೆ.