SHARE

ಬೆಳಗಾವಿ: ಸಾರ್ವಜನಿಕರ ನಗೆಗಡಲಿಗೆ ಈಡಾಗಿದ್ದ ಖಾಸಗಿ ಆಸ್ಪತ್ರೆಯ ‘ಬಿಲ್ ಟಾರಿಫ್ ‘ನ್ನು ಆಸ್ಪತ್ರೆ ಹಿಂಪಡೆದಿದ್ದು, ಜಿಲ್ಲಾಡಳಿತದ ಎದುರು ವಿಷಾದ ವ್ಯಕ್ತಪಡಿಸಿದೆ. ತನ್ನ ಕೋವಿಡ್ ಟೆಸ್ಟ್ ಟ್ರೀಟಮೆಂಟ್ ಟಾರಿಫ್ ಮೂಲಕ ಸಾರ್ವಜನಿಕರಿಗೆ ಆತಂಕ ಮತ್ತು ಮನರಂಜನೆ ನೀಡಿದ್ದ ಈ ಆಸ್ಪತ್ರೆ ಸರಕಾರಕ್ಕೂ ಮಜುಗುರ ಉಂಟು ಮಾಡಿತ್ತು.

ಸಾರ್ವಜನಿಕರ ಮೊಬೈಲನಲ್ಲಿ ವೈರಲ್ ಆಗಿದ್ದ ಈ ಮನೆಮುರುಕ ರೇಟ್ ಬೋರ್ಡ್ ಸರ್ಕ್ಯುಲರ್ ಪತ್ರ ಜಿಲ್ಲಾಡಳಿತದ ಪಿತ್ತ ನೆತ್ತಿಗೇರಿಸಿತ್ತು. ತತಕ್ಷಣ ಎಚ್ಚೆತ್ತ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಆಸ್ಪತ್ರೆಯಿಂದ ವಿವರಣೆ ಕೇಳಿದ್ದರು. ಖಾಸಗಿ ಆಸ್ಪತ್ರೆ ತನ್ನ ‘ಜರೂರು’ ಪತ್ರದ ಮೂಲಕ ಬೇಷರತ್ ವಿಷಾದ ವ್ಯಕ್ತಪಡಿಸಿ ‘ಭಾರಿ ಬಿಲ್’ ಹಿಂಪಡೆದಿರುವುದಾಗಿ ತಿಳಿಸಿದೆ. ಕರ್ನಾಟಕ ಸರಕಾರ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ದೇಶನ ಮತ್ತು ಮಾರ್ಗದರ್ಶಿಗಳ ಅಡಿ ನಡೆದುಕೊಳ್ಳುವುದಾಗಿ ಈ ಖಾಸಗಿ ಆಸ್ಪತ್ರೆ ಜಿಲ್ಲಾಡಳಿತದ ಎದುರು ಸ್ಪಷ್ಟಪಡಿಸಿದೆ.