SHARE

ಬೆಳಗಾವಿ: ಮಂಗಳೂರು ಜಿಲ್ಲಾಧಿಕಾರಿಯಾಗಿ 2013ನೇ ಬ್ಯಾಚನ ಐಎಎಸ್ ಅಧಿಕಾರಿ ಡಾ‌ ಕೆ. ವಿ. ರಾಜೇಂದ್ರ ಬೆಳಗಾವಿಯಿಂದ ವರ್ಗಾವಣೆ ಆಗಿದ್ದಾರೆ. ಕಳೆದ ಎರಡು ವರ್ಷದಿಂದ ಬೆಳಗಾವಿ ಜಿಪಂ. ಸಿಇಓ ಆಗಿ ಕಾರ್ಯನಿರ್ವಹಿಸಿದ್ದ ಅವರು ನೆರೆಹಾವಳಿ ಮತ್ತು ಕೊವಿಡ್ ನಿರ್ವಹಣೆಯಲ್ಲಿ ಶ್ರಮವಹಿಸಿದ್ದರು. ಬೆಳಗಾವಿ ಸಿಇಓ ಆಗಿ ಕೋಲಾರ ಜಿಪಂ. ಸಿಇಓ ಆಗಿರುವ ಹಾಗೂ 2016ನೇ ಬ್ಯಾಚನ ಐಎಎಸ್ ಅಧಿಕಾರಿ ಎಚ್. ವಿ. ದರ್ಶನ ಆಗಮಿಸಲಿದ್ದಾರೆ.