SHARE

ಬೆಳಗಾವಿಯ: ಪ್ರೈಮ್ ನ್ಯೂಸ್ ಕನ್ನಡ ಯುಟ್ಯೂಬ್ ಚಾನಲ್ ಹೆಸರಿನಲ್ಲಿ ಮಹಿಳೆಯರನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಐವರನ್ನು ಬಂಧಿಸುವಲ್ಲಿ ಬೆಳಗಾವಿ ಮಾಳಮಾರುತಿ ಪೋಲಿಸರು ಯಶಸ್ವಿಯಾಗಿದ್ದಾರೆ. ಮೂವರು ಮಹಿಳೆಯರು ಸೇರಿದಂತೆ ಐವರ ಬಂಧನವಾಗಿದ್ದು, ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಬಸವರಾಜ್ ಖಾನಗೊಂಡ ಎಂಬುವವರನ್ನು ಖದೀಮರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.

5 ಲಕ್ಷ ಹಣಕ್ಕಾಗಿ ಬ್ಲ್ಯಾಕಮೇಲ್ ಮಾಡುತ್ತಿದ್ದ ಸಂದರ್ಭದಲ್ಲಿ ಮಾಳಮಾರುತಿ ಪೋಲಿಸರ ದಾಳಿ ಮಾಡಿದ್ದು, ಎಸಿಪಿ ನಾರಾಯಣ ಭರಮನಿ ಹಾಗೂ ಇನ್ಸ್ಪೆಕ್ಟರ್ ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ ಐಡಿ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಗೌರಿ ಲಮಾಣಿ, ಮಂಜುಳಾ ಜೆಟ್ಟೆಣ್ಣವರ, ಸಂಗೀತಾ ಕಣಕಿಕೊಪ್ಪ, ರಘುನಾಥ್ ದುಮಾಳೆ, ಸದಾಶಿವ ಚಿಪ್ಪಲಕಟ್ಟಿ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.