SHARE

ಬೆಳಗಾವಿ: ವಿಶಾಲ ಭಾರತದ ಎಲ್ಲ ಪ್ರಮುಖ ಪವಿತ್ರ ಕಾರ್ಯಗಳಲ್ಲಿ ಬೆಳಗಾವಿ ಸೇವೆ ಅನನ್ಯ..! ಇಡೀ ದೇಶದ ಜನಜೀವನ ಶ್ರೀರಾಮ ಮತ್ತು ರಾಮಜನ್ಮಭೂಮಿ ಆದರ್ಶಗಳ ಮಧ್ಯೆ ನಡೆದಿರುವುದು ವಾಸ್ತವ. ಶತಕೋಟಿ ಜನರ ಶತಮಾನಗಳ ಆಶಯ ರಾಮಮಂದಿರ ನಿರ್ಮಾಣ ಕಾರ್ಯ ನಾಳೆ ಬುಧವಾರ ಚಾಲನೆ ಪಡೆಯಲಿದೆ. ಇಂತಹದೊಂದು ಮಹತ್ತರ ಕಾರ್ಯಕ್ರಮಕ್ಕೆ ಮಹೂರ್ತ ಸಮಯ ಮತ್ತು ದಿನಾಂಕ ಸೂಚಿಸಿರುವುದು ಬೆಳಗಾವಿ ರಾಘವೇಂದ್ರ ಮಠದ ವಾಗ್ಮೀ, ವಿದ್ವಾಂಸ ವಿಜಯೇಂದ್ರಜೀ ಶರ್ಮಾ…! ಅವರ ನುಡಿಯಂತೆ ಮೂರ್ನಾಲ್ಕು ದಿನಾಂಕ ಕೊಡಲಾಗಿತ್ತು, ಆ ಪೈಕಿ ಆ. 5ನ್ನು ರಾಮಮಂದಿರ ಟ್ರಸ್ಟ್ ಆಯ್ಕೆ ಮಾಡಿಕೊಂಡಿದೆ. ಅಂದು ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ಬೆಳಗಾವಿಯಲ್ಲಿ ವಹಿಸಿದರು. ಇಂದು ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಳಗಾವಿಗರೇ ಇಟ್ಟಿಗೆ ಇಟ್ಟಂತಾಗಿದೆ.

ಬೆದರಿಕೆ-ಭದ್ರತೆ: ಈ ಮಧ್ಯೆ ದಿನಾಂಕ ಮತ್ತು ಮಹೂರ್ತ ನಿಗದಿ ಮಾಡಿದ ಶ್ರೀಗಳಿಗೆ ಕೆಲ ಕಿಡಿಗೇಡಿಗಳು ಬೆದರಿಕೆ ಹಾಕಿದರು ಎಂಬ ಮಾಹಿತಿ ಹೊರಬಿದ್ದಿದ್ದು, ಶ್ರೀಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ವಿದ್ವಾಂಸ ಶ್ರೀ ವಿಜಯೇಂದ್ರ ಶರ್ಮಾಜೀ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್ ತಿಳಿಸಿದ್ದಾರೆ.