SHARE

ಬೆಳಗಾವಿ: ನಗರ ಉತ್ತರ ಸಂಚಾರಿ ಠಾಣೆ ಪೊಲೀಸ್ ಪೆದೆ ಸಂಜು ಬಂಡಾರಿ(೪೦) ಎಂಬುವವರು ಹೃದಯಾಘಾತದಿಂದ ಖಾನಾಪುರದಲ್ಲಿ ಅಸುನೀಗಿದ್ದಾರೆ. ರಜೆ ಮೇಲೆ ಹಟ್ಟಿಹೊಳಿ ಗ್ರಾಮಕ್ಕೆ ತೆರಳಿದ್ದ ಅವರು ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಸೇರಿದ್ದರು. ಇಂದು ಬೆಳಗ್ಗೆ 11ಕ್ಕೆ ಹೃದಯಾಘಾತದಿಂದ ಅಸುನೀಗಿದ ವರದಿಯಾಗಿದೆ. PSI ಕೃಷ್ಣವೇಣಿ ಅವರ ಪತಿಯಾಗಿದ್ದ ಸಂಜು ಅವರು ಟ್ರಾಫಿಕ್ ಕೆಲಸದಲ್ಲಿ ಕಟ್ಟುನಿಟ್ಟಾಗಿದ್ದರು.