SHARE

ಬೆಳಗಾವಿ: ರಾಜ್ಯದ ಪ್ರತಿಷ್ಠಿತ ನ್ಯಾಯವಾದಿಗಳಾಗಿದ್ದ ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಅನೀಲ ಮುಳವಾಡಮಠ(ಎ. ಜಿ. ಮುಳವಾಡಮಠ) ಇಂದು ಅಸುನೀಗಿದರು. ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು. ಕೋವಿಡ್ 19ಗೆ ತುತ್ತಾಗಿದ್ದರು ಎನ್ನಲಾಗಿದೆ. ಅವರ ಕುಟುಂಬ ವರ್ಗ ಕ್ವಾರಂಟೈನನಲ್ಲಿ ಇಡಲಾಗಿದೆ. ಮುಳವಾಡಮಠ ಸಾಮಾಜಿಕ ಹೋರಾಟಗಾರರಾಗಿ ಬಾರ್ ನಾಯಕತ್ವ ವಹಿಸಿದ್ದರು. ಅವರ ನಿಧನಕ್ಕೆ ಸಮಸ್ತ ನ್ಯಾಯವಾದಿಗಳು ಕಂಬನಿ ಮಿಡಿದಿದ್ದಾರೆ.