SHARE

ಬೆಳಗಾವಿ: ಕೊರೊನಾ ಪಾಸಿಟಿವ್ ಧೃಡಪಟ್ಟಿದ್ದ ಗೋಕಾಕ ಬಿಜೆಪಿ ಮುಖಂಡ ಎಸ್. ಎ. ಕೋತವಾಲ ಚಿಕಿತ್ಸೆ ಫಲಿಸದೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಜು. 27ರಂದು ಜ್ವರ ನಿಮಿತ್ತ ಗೋಕಾಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ನಂತರ ಬೆಳಗಾವಿ ಖಾಸಗಿ ಆಸ್ಪತ್ರೆಗೆ ಕೊವಿಡ್ ಚಿಕಿತ್ಸೆಗಾಗಿ ಕಳಿಸಲಾಗಿತ್ತು. ಇಂದು ಬೆಳಿಗ್ಗೆ 7ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.ಮೃತರು ಗೋಕಾಕ ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿದ್ದರು.