SHARE

ಬೆಳಗಾವಿ: ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಆದೇಶಿಸಿದ್ದಾರೆ. ಕೊರೊನಾ ಪೆಂಡಮಿಕ್ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾಂಕ್ರಾಮಿಕ ಕೊರೊನಾ ಹರಡದಂತೆ ತಡೆಯಲು Disaster Management Act ಅಡಿ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಲಾಗಿದೆ. ಮನೆಯಲ್ಲಿ 2 ಅಡಿ, ದೇವಸ್ಥಾನಗಳಲ್ಲಿ 4 ಅಡಿ ಮೀರದಂತೆ ಮಣ್ಣಿನ ಗಣಪತಿಗಳನ್ನು ಮಾತ್ರ ಇಟ್ಟು ಪೂಜಿಸತಕ್ಕದ್ದು, ಪಿಓಪಿ ಗಣೇಶನಿಗೆ ಅವಕಾಶವಿಲ್ಲ. ಮಹಾನಗರ ಪಾಲಿಕೆ/ ಪೊಲೀಸ್/ಸ್ಥಳಿಯ ನಗರಾಡಳಿತ/ಗ್ರಾಪಂ.ಗಳು/ ಪರಿಸರ ಮಾಲಿನ್ಯ/ಅರಣ್ಯ ಸೇರಿ ಇತರ ಇಲಾಖೆಗಳ ಪೂರತವಾಣುಮತಿ ಪಡೆಯಬೇಕು ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.