SHARE

ಬೆಳಗಾವಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಸ್ಥಾನಕ್ಕೆ ಸುರೇಂದ್ರ ಎಸ್. ಅನಗೋಳಕರ ಇಂದು ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ನನ್ನ ಬಗ್ಗೆ ಪಕ್ಷ ಸಂತುಷ್ಟಿ ಹೊಂದಿಲ್ಲ ಎಂದಿದ್ದಾರೆ. ಜೊತೆಗೆ ನನ್ನ ವೈಯಕ್ತಿಕ ಸಾಮಾಜಿಕ ಕಾರ್ಯದ ಬಗ್ಗೆ ಪಕ್ಷದ ಜಿಲ್ಲಾ ಸಮಿತಿಗೆ ಖುಷಿ ಇಲ್ಲ. ಪಕ್ಷದ ಚಿಹ್ನೆ ಮತ್ತು ಹೆಸರು ಸಾಮಾಜಿಕ ಕಾರ್ಯದಲ್ಲಿ ನಾನು ಬಳಸದ ಬಗ್ಗೆ ಪಕ್ಷ ಅಸಂತುಷ್ಟಿ ಹೊಂದಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.