SHARE

ಬೆಳಗಾವಿ: ಬಹುದಿನಗಳ ಬೇಡಿಕೆಯ ಬೆಳಗಾವಿ- ಧಾರವಾಡ ನೇರ ಟ್ರೇನ್ ಸಂಪರ್ಕ ಸಾಕಾರಗೊಳ್ಳಲಿದೆ. ಕೇಂದ್ರ ರೈಲ್ವೇ ರಾಜ್ಯಖಾತೆ ಸಚಿವ ಸುರೇಶ ಅಂಗಡಿ ಇಂದು ಸುದ್ದಿಗೋಷ್ಢಿಯಲ್ಲಿ ಹೊಸ ರೂಟ್ ಮ್ಯಾಪ್ ಬಿಡುಗಡೆಗೊಳಿಸಿದರು. ಇಲ್ಲಿಯವರೆಗೆ ಇರುವ ಲೋಂಡಾ ರೈಲುಮಾರ್ಗ 3ತಾಸು ತಡ ಮಾಡುತ್ತಿದೆ. ಇದರಿಂದ ಈಗ ಹೊಸ ಮಾರ್ಗ ಸಾಕಾರದತ್ತ ನಡೆದಿದೆ ಎಂದು ಸಚಿವರು ಹೃಷ ವ್ಯಕ್ತಪಡಿಸಿದರು. ಕಳೆದ ಬಾರಿಯ ಸರ್ವೇ ಒಪ್ಪಿಗೆ ಪಡೆಯದ ಹಿನ್ನೆಲೆ ಎರಡೇ ವೃಷದಲ್ಲಿ ಹೊಸ ಸರ್ವೇ ಮಾಡಲಾಗಿದೆ. ಹೊಸ ಮಾರ್ಗ ಬೆಳಗಾವಿ, ದೇಸೂರು, ಕನವಿಕರವಿನಕೊಪ್ಪ, ಬಾಗೇವಾಡಿ, ಎಂ. ಕೆ. ಹುಬ್ಬಳ್ಳಿ, ಹೂಲಿಕಟ್ಟಿ, ಕಿತ್ತೂರು, ತೇಗೂರು, ಮಮ್ಮಿಗಟ್ಟಿ, ಕ್ಯಾರಕೊಪ್ಪ ಮೂಲಕ ಧಾರವಾಡ ತಲುಪಲಿದೆ.ಬೆಂಗಳೂರು ಮುಂಬೈ ಮಧ್ಯೆ ಈ ನಡುವೆ ಆಗುತ್ತಿದ್ದ ವ್ಯರ್ಥ ಸಮಯ ಈಗ ಉಳಿತಾಯ ಆಗಲಿದೆ ಎಂದರು.