SHARE

ಬೆಳಗಾವಿ: ಈ ದೇಶ ಬಿಜೆಪಿ ಆಸ್ತಿ ಅಲ್ಲ, ಯೋಗಿ ಆದಿತ್ಯನಾತ್ ಆಸ್ತಿಯೂ ಅಲ್ಲ. ಸಂತ್ರಸ್ತೆ ಹೆಣ್ಣು ಮಗಳ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗುತ್ತಿದ್ದರೆ ರಾಹುಲ್ ಗಾಂಧಿಯನ್ನು ತಡೆದಿದ್ದಾರೆ. ಯೋಗಿನೋ ಆತ ರೋಗಿನೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಯೋಗಿ ಆದಿತ್ಯನಾಥ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ. ಜಂಗಲ್ ರಾಜ್ಯದಲ್ಲಿ ಕಾನೂನು ಇಲ್ಲ, ಪೊಲೀಸ್ ಸರ್ವಾಧಿಕಾರಿ ರೀತಿಯಲ್ಲಿ ವರ್ತನೆ ಮಾಡ್ತಿದ್ದಾರೆ. ಸಿಎಂ ಯೋಗಿ ಸೂಚನೆಯಂತೆ ಪೊಲೀಸ್ ರು ರಾಹುಲ್ ಗಾಂಧಿಗೆ ತಡೆದಿದ್ದಾರೆ. ಯೋಗಿ ಆದಿತ್ಯನಾತ್ ಸಿಎಂ ಆಗಿ ಮುಂದುವರೆಯಬಾರದು ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಇನ್ನು ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟಿಲ್ಲ, ದುಡ್ಡು ಕೊಟ್ಟಿಲ್ಲ. ಈ ಸಾರಿ ಪ್ರವಾಹ ಬಂದಾಗ ಒಂದೇ ಒಂದು ಪೈಸೆ ಖರ್ಚು ಮಾಡಿಲ್ಲ. ಭ್ರಷ್ಟಾಚಾರ ಆಗಿದೆ, ಕೋವಿಡ್ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದಾಗ ಅವರು ಒಪ್ಪಲಿಲ್ಲ. ನಾಲ್ಕು ಸಾವಿರ ಕೋಟಿಯಲ್ಲಿ ಎರಡು ಸಾವಿರ ಕೋಟಿ ಲಂಚ ಹೊಡೆದಿದ್ದಾರೆ. ಇನ್ನು ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಂಡ್ರೇ ಮೊಮ್ಮಗ ಆರ್‍ಟಿಜಿಎಸ್ ಮೂಲಕ ಪಡೆಯುತ್ತಿದ್ದಾರೆ ಎಂದು ಸಿದ್ರಾಮಯ್ಯ ಗಂಭೀರ ಆರೋಪ ಮಾಡಿದರು.

ಬಳಿಕ ಸಿದ್ದರಾಮಯ್ಯ ಬ್ರಿಟಿಷರಗಿಂತ ಕೆಟ್ಟದಾಗಿ ಆಡಳಿತ ನಡೆಸಿದ್ದರೂ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಆರೋಪಕ್ಕೆ ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ನಳೀನ್ ಕುಮಾರ್ ಕಟೀಲ್ ಓರ್ವ ಯಕಶ್ಚಿತ್ ರಾಜಕಾರಣಿ, ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ. ಇವರ ಕಾಲದಲ್ಲಿ ಸಂಬಳ ಕೊಡಲು ದುಡಿಲ್ಲ ಎಂದು ಕಿಡಿಕಾರಿದರು.