SHARE

ಬೆಳಗಾವಿ: ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷದಿಂದ ಪ್ರೇರಿತರು ಮಾಡುತ್ತಿರುವ ಅಪಪ್ರಚಾರದಿಂದ ಇಂದು ರೈತರು ಗೊಂದಲಕ್ಕೀಡಾಗಿದ್ದು, ರೈತರಿಗೆ ಸರಕಾರ ಕಾಯ್ದೆಗೆ ಬಗ್ಗೆ ತಿಳಿಸುವ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನುಡಿದಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲೇ ಎಪಿಎಂಸಿ ಕಾಯ್ದೆಯ ಬಗ್ಗೆ ಹೇಳಿಕೊಂಡಿತ್ತು. ಆದರೆ ಇಂದು ಅದೇ ಪಕ್ಷ ನಾವು ಮಾಡಿದ ಕಾಯ್ದೆಗಳ ವಿನಾಕಾರಣ ವಿರೋಧ ಮಾಡುತ್ತಿದೆ. ರಾಹುಲ್ ಗಾಂಧೀ ಅವರು ಹೇಳುವುದೊಂದು ಮಾಡುವುದಿನ್ನೊಂದು ಮಾಡಬಾರದು ಎಂದು ರಾಹುಲ್ ಗಾಂಧೀ ಅವರಿಗೆ ಸಚಿವ ಪ್ರಹ್ಲಾದ ಜೋಶಿ ಎಚ್ಚರಿಸಿದ್ದಾರೆ.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಇಂದು ನಡೆದುಕೊಂಡಿದೆ. ಅದಕ್ಕಾಗಿ ಇಂತಹ ಮಹತ್ತರ ಬದಲಾವಣೆ ಕೇಂದ್ರ ಸರಕಾರ ಮಾಡಿದೆ. ಇದನ್ನೇ ಕಾಂಗ್ರೆಸ್ ಗೊಂದಲ ಸೃಷ್ಟಿಸಲು ಉಪಯೋಗ ಮಾಡುತ್ತಿದೆ ಎಂದು ಜೋಶಿ ಕಿಡಿಕಾರಿದರು. ರಾಹುಲ್ ಗಾಂಧಿ ಅವರು ಉತ್ತಮ ವಾಗ್ಮಿಗಳು, ಜ್ಞಾನವಂತರು, ಅವರಷ್ಟು ನಮಗಿಲ್ಲ ಬಿದ್ಇ ಎಂದು ರಾಹುಲ್ ಕಾಲು ಎಳೆದರು. ದಳ್ಳಾಳಿಗಳಿಗೆ ರೈತರು ಕಮಿಷನ್ ಕೊಡಬೇಕಿಲ್ಲ, ಎಪಿಎಂಸಿಗಳನ್ನು ಸರಕಾರ ಬಂದ್ ಮಾಡಲಾರದು. ಕಾಯ್ದೆ ಬದಲಾವಣೆಯಿಂದ ನಡುವಿನ ದಳ್ಳಾಳಿಗಳ ಆಟ ನಿಲ್ಲಲಿದೆ. ಕಾಂಗ್ರೆಸ್ ದಳ್ಳಾಳಿ ಎಜೆಂಟರ್ ಒತ್ತಡಕ್ಕೆ ಮಣಿದಂತಿದೆ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ‌ಕಮಿಷನ್ ಏಜೆಂಟರಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ನಾವು ಕಾಯ್ದೆ ಬದಲಾವಣೆ ಮಾಡಿರಿದ್ದರಿಂದ ಯಾರಿಗೂ ಕಮೀಷನ್ ಕೊಡುವ ಪ್ರಶ್ನೆ ಬರೋದಿಲ್ಲ. ರಾಹುಲ್ ಗೆ ತಿಳುವಳಿಕೆ ಇಲ್ಲ
ಕಾಂಗ್ರೆಸ್ ದಲ್ಲಾಳಿಗಳ ಪರವೋ, ರೈತರ ಪರವೂ ಸ್ಪಷ್ಟಪಡಿಸಬೇಕು ರೈತರು ಹಾಗೂ ನಮ್ಮ ಮಿತ್ರ ಪಕ್ಷ ಅಕಾಲಿ ದಳವೂ ಸಹ ದಲ್ಲಾಗಳ ಲಾಬಿಗೆ ಒತ್ತಡಕ್ಕೆ ಮಣಿದಿದೆ ಎನಿಸುತ್ತಿದೆ. ಸಾಮಾನ್ಯ ರೈತರು ಇದರಿಂದ ದೂರ ಉಳಿದಿದ್ದಾರೆ. ಕೆಲ ರೈತ ಮುಖಂಡರು ದಲ್ಲಾಳಿಗಳ ಲಾಭಿಗೆ ಮಣಿದಿದ್ದಾರೆ ಎಂದು ರೈತ ಮುಖಂಡರ ವಿರುದ್ಧವೂ ಹರಿಹಾಯ್ದರು. ಅನಗತ್ಯ,ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ದೇಶಾದ್ಯಂತ ತಪ್ಪು ಮಾಹಿತಿ ನೀಡುತ್ತಿದೆ, ಮುಗ್ದ ರೈತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದರು.